ತೆಲುಗಿನ ಆಮಂತ್ರಣ ಪತ್ರಿಕೆ
ದೇಶ
ಜನಾರ್ದನ ರೆಡ್ಡಿ ಆಯ್ತು, ಈಗ ಬೀಗರ ವಿಡಿಯೋ ಆಮಂತ್ರಣ ಪತ್ರಿಕೆ
ಗಣಿಧಣಿ ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಪುತ್ರಿ ಬ್ರಹ್ಮಿಣಿಯ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸಿದ್ದು, ಇದೀಗ ಅವರ ಬೀಗರು ಸಹ ಮಗನ...
ಬಳ್ಳಾರಿ: ಗಣಿಧಣಿ ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಪುತ್ರಿ ಬ್ರಹ್ಮಿಣಿಯ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸಿದ್ದು, ಇದೀಗ ಅವರ ಬೀಗರು ಸಹ ಮಗನ ಮದುವೆಯ ವಿಡಿಯೋ ಆಮಂತ್ರಣ ಪತ್ರಿಕೆಯನ್ನು ಮಾಡಿಸಿದ್ದಾರೆ.
ಜನಾರ್ದನ ರೆಡ್ಡಿ ಬೀಗರು ಹೈದರಾಬಾದ್ ನವರಾಗಿದ್ದು ಅವರು ತಮ್ಮ ಬಂಧುಗಳಿಗೆ ತೆಲುಗಿನಲ್ಲಿ ಆಮಂತ್ರಣ ವಿಡಿಯೋ ಪತ್ರಿಕೆಯನ್ನು ರೆಡಿ ಮಾಡಿಸಿದ್ದಾರೆ. ಬ್ರಹ್ಮಿಣಿ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 16ರಂದು ನಡೆಯಲಿದ್ದು, ನವೆಂಬರ್ 20ರಂದು ಹೈದರಾಬಾದ್ ನಲ್ಲಿರುವ ಪೋರ್ಟ್ ಗ್ರ್ಯಾಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.
ಅಳಿಯ ಹೈದರಾಬಾದ್ ಉದ್ಯಮಿ ರಾಜೀವ್ ವಿದೇಶದಲ್ಲಿ ರಿಯಲ್ ಎಸ್ಟೇಟ್ ಮತ್ತು ಕನ್ ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ