ಮನೆ ತುಂಬಾ ಚಿನ್ನ, ಬೆಳ್ಳಿ: ಎಸಿಬಿ ಬಲೆಗೆ ಬಿದ್ದ ಆಂಧ್ರದ ಆರ್ ಟಿಒ ಅಧಿಕಾರಿ!

ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಭಾರಿ ಕುಳವೊಂದು ಬಲೆಗೆ ಬಿದ್ದಿದ್ದು, ಆರ್ ಟಿಒ ಅಧಿಕಾರಿಯ ಫ್ಲಾಟ್ ನ ತುಂಬಾ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಲಕ್ಷಾಂತರ ರು ಮೌಲ್ಯದ ವಸ್ತುಗಳು ಪತ್ತೆಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಗುಂಟೂರು: ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಭಾರಿ ಕುಳವೊಂದು ಬಲೆಗೆ ಬಿದ್ದಿದ್ದು, ಆರ್ ಟಿಒ ಅಧಿಕಾರಿಯ ಫ್ಲಾಟ್ ನ ತುಂಬಾ ಚಿನ್ನ  ಮತ್ತು ಬೆಳ್ಳಿ ಸೇರಿದಂತೆ ಲಕ್ಷಾಂತರ ರು ಮೌಲ್ಯದ ವಸ್ತುಗಳು ಪತ್ತೆಯಾಗಿವೆ.

ಅಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಆರ್ ಟಿಒ ಅಧಿಕಾರಿ ಪೂರ್ಣ ಚಂದ್ರರಾವ್ ಅವರಿಗೆ ಸೇರಿದ ಸುಮಾರು 7 ಫ್ಲಾಟ್,  ಮನೆಹಾಗೂ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು,  ಸುಮಾರು 60 ಕೆಜಿ ತೂಕದ ಬೆಳ್ಳಿ ವಸ್ತುಗಳು, 1 ಕೆಜಿ ತೂಕದಷ್ಟು ಚಿನ್ನಾಭರಣಗಳು ಹಾಗೂ 20 ಲಕ್ಷ ನಗದು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ ಪೂರ್ಣಚಂದ್ರ ರಾವ್ ಅವರಿಗೆ ಒಟ್ಟು 7 ಫ್ಲಾಟ್ ಹಾಗೂ 1 ಮನೆ ಇದ್ದು, ಈ ಪೈಕಿ ಮನೆಯ ಮೇಲೆ ಮಾತ್ರ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯೊಂದರಲ್ಲೇ ಇಷ್ಟು ಭಾರಿ  ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ನಗದ ಪತ್ತೆಯಾಗಿದೆ. ಎಲ್ಲ 7 ಫ್ಲಾಟ್ ಗಳ ಮೇಲೆ ದಾಳಿ ನಡೆಸಿದರೆ ಮತ್ತಷ್ಟು ಆಸ್ತಿ ಪತ್ತೆಯಾಗಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ  ಪೂರ್ಣಚಂದ್ರ ರಾವ್ ಅವರು ಕಳೆದ 34 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದ್ದು, 1981ರಲ್ಲಿ ಪೂರ್ಣಚಂದ್ರ ಅವರು, ಮೊಟಾರ್ ವಾಹನ ಇನ್ಸ್ ಪೆಕ್ಟರ್ ಆಗಿ  ಆಯ್ಕೆಯಾಗಿದ್ದರು. ಬಳಿಕ ಒಂಗೋಲು, ನೆಲ್ಲೂರಿನಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಗುಂಟೂರಿನಲ್ಲಿ ಪೂರ್ಣ ಚಂದ್ರ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಅಧಿಕಾರಿಯ ಇನ್ನು ಸ್ಥಿರ ಆಸ್ತಿಗಳ ಪಟ್ಟಿ ಕೂಡ ಉದ್ಧವಿದ್ದು, ವಿನುಕೊಂಡಾದಲ್ಲಿ ಏಳು ಅಪಾರ್ಟ್ ಮೆಂಟ್ ಗಳು ಹಾಗೂ 2 ಮನೆ, ಗುಂಟೂರು ಜಿಲ್ಲೆಯಲ್ಲಿ 2 ಮನೆ ಹಾಗೂ ಹೈದರಾಬಾದ್ ಹಾಗೂ  ವಿಜಯವಾಡದಲ್ಲಿ ತಲಾ ಒಂದು ಮನೆಗಳನ್ನು ಹೊಂದಿದ್ದಾರೆ. ಈ ಎಲ್ಲ ಆಸ್ತಿಗಳ ಮೌಲ್ಯವೇ ಸುಮಾರು 25 ಕೋಟಿಗೂ ಅಧಿಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com