ಶಿಮ್ಲಾ: 5 ತಿಂಗಳ ಬಳಿಕ ಸ್ವಂತ ತಂದೆ-ತಾಯಿ ಮಡಿಲಿಗೆ ಸೇರಿದ ಶಿಶುಗಳು

ಐದು ತಿಂಗಳ ಹಿಂದೆ ಇಲ್ಲಿನ ಕಮಲ್ ನೆಹರೂ ಮದರ್ ಅಂಡ್ ಚೈಲ್ಡ್ ಹಾಸ್ಪಿಟಲ್ ನಲ್ಲಿ ಅದಲು ಬದಲಾಗಿದ್ದ ಶಿಶುಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿಮ್ಲಾ: ಐದು ತಿಂಗಳ ಹಿಂದೆ ಇಲ್ಲಿನ ಕಮಲ್ ನೆಹರೂ ಮದರ್ ಅಂಡ್ ಚೈಲ್ಡ್  ಹಾಸ್ಪಿಟಲ್ ನಲ್ಲಿ ಅದಲು ಬದಲಾಗಿದ್ದ ಶಿಶುಗಳು ಮತ್ತೆ ತಮ್ಮ ಸ್ವಂತ ಪೋಷಕರ ಮಡಿಲಿಗೆ ಸೇರಿದ ಘಟನೆ ನಡೆದಿದೆ.
ಶಿಮ್ಲಾದ ಖಲಿನಿ ಎಂಬಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗಂಡು ಮತ್ತು ಹೆಣ್ಣು ಮಗುವಿನ ಪೋಷಕರು ತಮ್ಮ ಶಿಶುವನ್ನು ಸೌಹಾರ್ದಯುತವಾಗಿ ಅದಲು ಬದಲು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಳೆದ 21ರಂದು ಆದೇಶ ಹೊರಡಿಸಿದ ಹಿಮಾಚಲ ಪ್ರದೇಶ ಹೈಕೋರ್ಟ್ ಮಗುವಿನ ನಿಜವಾದ ಜೈವಿಕ ಪೋಷಕರಿಗೆ ಹಿಂತಿರುಗಿಸುವಂತೆ ಆದೇಶ ನೀಡಿತ್ತು. ಅದರಂತೆ ಶಿಶುಗಳು ಸುರಕ್ಷಿತವಾಗಿ ತಮ್ಮ ಸ್ವಂತ ತಂದೆ-ತಾಯಿ ಮಡಿಲನ್ನು ಸೇರಿವೆ.
ಆಗಿದ್ದೇನು? ಮೇ 26ರಂದು ಹುಟ್ಟಿದ ಮಗುವಿನ ಪೋಷಕರು ತಮ್ಮ ಮಗು ಇದಲ್ಲ, ಅದಲು ಬದಲಾಗಿದೆ ಎಂದು ಆರೋಪಿಸಿದ್ದರು. ಅವರ ದೂರಿನಂತೆ ಅದಲು ಬದಲಾದ ಮಗುವಿನ ಪೋಷಕರ ಡಿಎನ್ ಎ ಮಾದರಿಯ ಪರೀಕ್ಷೆ ನಡೆಸುವಂತೆ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಡಿಎನ್ಎ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಕೋರ್ಟ್ ಸಮ್ಮುಖದಲ್ಲಿ ಶಿಶುವನ್ನು ಸೌಹಾರ್ದಯುತವಾಗಿ ಮರಳಿ ಪಡೆದುಕೊಂಡರು. 
ಅರ್ಜಿದಾರರ ಪರ ವಕೀಲರು, ಶಿಶುಗಳ ಅದಲು ಬದಲಿಕೆಗೆ ಕಾರಣರಾದ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡುತ್ತೇವೆ ಎಂದು ಹೇಳುತ್ತಾರೆ.
ಹೆಣ್ಣು ಮಗುವಿನ ತಾಯಿ ಅಂಜನಾ ಠಾಕೂರ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ''ನನ್ನ ಮಗು ವಾಪಸ್ಸು ಸಿಕ್ಕಿದ್ದು ನನಗೆ ಸಂತಸ ತಂದಿದೆ. ಶಿಶುಗಳನ್ನು ಅದಲು ಬದಲು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಬಯಸುತ್ತೇನೆ'' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com