ಅಣ್ಣಾ ವಿ.ವಿ ವಿದ್ಯಾರ್ಥಿಗಳಿಗೆ ಸಾವಿನ ಬೋನಾಗಿ ಮಾರ್ಪಟ್ಟಿರುವ ಆಂಬ್ಯುಲೆನ್ಸ್

ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ವಿದ್ಯಾರ್ಥಿನಿಯೊಬ್ಪರ ಸಾವು ಅಲ್ಲಿನ ವೈದ್ಯಕೀಯ ಸೌಕರ್ಯದ ಅವ್ಯವಸ್ಥೆಯನ್ನು...
ಅಣ್ಣಾ ವಿಶ್ವವಿದ್ಯಾಲಯ(ಸಂಗ್ರಹ ಚಿತ್ರ)
ಅಣ್ಣಾ ವಿಶ್ವವಿದ್ಯಾಲಯ(ಸಂಗ್ರಹ ಚಿತ್ರ)
ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ವಿದ್ಯಾರ್ಥಿನಿಯೊಬ್ಪರ ಸಾವು ಅಲ್ಲಿನ ವೈದ್ಯಕೀಯ ಸೌಕರ್ಯದ ಅವ್ಯವಸ್ಥೆಯನ್ನು ಸೂಚಿಸುತ್ತದೆ. ವಿಶ್ವವಿದ್ಯಾಲಯದೊಳಗೆ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆಂದು ಇರುವ ವಸತಿ ನಿಲಯ ಲಾವೆಂಡರ್ ಹಾಸ್ಟೆಲ್ ನಲ್ಲಿ ಮೂರನೇ ಇಸಿಇ ವಿದ್ಯಾರ್ಥಿನಿಯನ್ನು ಆಂಬ್ಯುಲೆನ್ಸ್ ನಲ್ಲಿ ಸರ್ಕಾರಿ ರಾಯಪೆಟ್ಟ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಳು. ಈ ಘಟನೆಯ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಡೆ ವೈದ್ಯಕೀಯ ಸೌಲಭ್ಯದ ಕೊರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಣ್ಣಾ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಇಂಜಿನಿಯರಿಂಗ್ ಕಾಲೇಜು, ಅಲಗಪ್ಪ ಕಾಲೇಜ್ ಆಫ್ ಟೆಕ್ನಾಲಜಿ, ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ಕಾಲೇಜುಗಳಿದ್ದು ಸುಮಾರು 5 ಸಾವಿರ ವಿದ್ಯಾರ್ಥಿಗಳಿದ್ದಾರೆ. ಕ್ಯಾಂಪಸ್ ಒಳಗೆ ವೈದ್ಯಕೀಯ ಸೌಲಭ್ಯವಿದೆ. ಆದರೆ ಅಂದು ಭಾನುವಾರವಾದ್ದರಿಂದ ಮುಚ್ಚಿತ್ತು. ಭಾನುವಾರ ವೈದ್ಯಕೀಯ ಸೌಲಭ್ಯ ಸಿಗುವುದಿಲ್ಲ ಮತ್ತು ಎರಡನೇ ಶನಿವಾರ ಅರ್ಧ ದಿನ ಮಾತ್ರ.
ವಿದ್ಯಾರ್ಥಿನಿ ಪ್ರಜ್ಞೆತಪ್ಪಿ ಬಿದ್ದದ್ದನ್ನು ನೋಡಿದವರು ತಕ್ಷಣ ಕಾಲೇಜು ಆಂಬ್ಯುಲೆನ್ಸ್ ಮತ್ತು 108ಗೆ ಕರೆ ಮಾಡಿದ್ದರು. ತಕ್ಷಣವೇ ಆಂಬ್ಯುಲೆನ್ಸ್ ಬಂದಿತ್ತು ಕೂಡ. ಕಾಲೇಜಿನ ಆಂಬ್ಯುಲೆನ್ಸ್ ನಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯವಿಲ್ಲದ್ದರಿಂದ 108ನಲ್ಲಿ ಕರೆದುಕೊಂಡು ಹೋಗಲು ಉಳಿದವರು ಪ್ರಯತ್ನಿಸಿದರು.
ವಿದ್ಯಾರ್ಥಿನಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕದಿರುವುದು, ವಿದ್ಯಾಲಯದ ಆಂಬ್ಯುಲೆನ್ಸ್ ಸರಿಯಾಗಿಲ್ಲದಿರುವುದು ಆಕೆ ಕೊನೆಯುಸಿರೆಳೆಯಲು ಕಾರಣ ಎಂಬುದು ಸಹಪಾಠಿಗಳ ದೂರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com