
ಜೈಪುರ: ನಿಖಾ ಹಲಾಲಾ ಎಂಬ ಶರಿಯಾ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಸ್ನೇಹಿತನ ಜತೆ ಮಲಗಿಸಿ, ಆ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿರುವ ಘಟನೆ ರಾಜಸ್ತಾನಜದ ಜೈಪುರದಲ್ಲಿ ನಡೆದಿದೆ,
ತಾನು ಜೂಜಿನಲ್ಲಿ ಸೋತಿದ್ದಕ್ಕೆ ಪರಿಹಾರವಾಗಿ ತನ್ನ ಹೆಂಡತಿಯನ್ನು ಆತನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹೇಳಿದ್ದಾನೆ. ಆಕೆ ಇದಕ್ಕೆ ಒಪ್ಪದಿದ್ದಾಗ ಕೋಪದಿಂದ ತಲಾಕ್ ಹೇಳಿದ್ದಾನೆ. ತಲಾಕ್ ಹೇಳಿದ ನಂತರವೂ ಮನೆಯಿಂದ ಹೊರಹಾಕದೇ ತನ್ನ ಜೊತೆಯಲ್ಲೇ ಇಟ್ಟು ಕೊಂಡಿದ್ದಾನೆ. 25 ವರ್ಷದಿಂದ ಸಂಸಾರ ನಡೆಸುತ್ತಿರುವ ಈ ಂದಪತಿಗೆ ಇಬ್ಬರು ಮಕ್ಕಳು ಇದ್ದಾರೆ. (ನಿಖಾ ಹಲಾಲಾ ಎಂದರೆ, ಮಹಿಳೆಯೊಬ್ಬಳು ಗಂಡನಿಂದ ವಿಚ್ಛೇದನ ಪಡೆದ ಮೇಲೆ ಮತ್ತೆ ಮರಳಿಬರುವುದಾದರೆ ಅದಕ್ಕೂ ಮೊದಲು ಬೇರೊಬ್ಬನನ್ನು ಮದುವೆಯಾಗಿ ದಾಂಪತ್ಯ ಅನುಭವಿಸಬೇಕು. ನಂತರ ಆತ ತಲಾಕ್ ನೀಡಿದರೆ ಇಲ್ಲವೇ ಮೃತನಾದರೆ ಈಕೆ ಮತ್ತೆ ಮೊದಲನೇ ಗಂಡನನ್ನು ಸೇರಬಹುದು).
ಆಗಸ್ಟ್ 5 ರಂದು ಆಕೆಯ ಆರೋಗ್ಯ ಸರಿಯಿಲ್ಲದಿರುವಾಗಲೇ ಸುತ್ತಾಟಕ್ಕೆ ಕರೆದೊಯ್ದ ಪತಿ ಆರೋಗ್ಯ ಸುಧಾರಣೆಗೆ ಅಂತ ಮಾತ್ರೆಯನ್ನೂ ಕೋಟ್ಟಿದ್ದಾನೆ. ಸ್ನೇಹಿತನ ಮನೆಗೆ ಕರೆದುಕೊಂಡುಹೋದ ನಂತರ ಇನ್ನಷ್ಟು ಮಾತ್ರೆಗಳನ್ನು ನೀಡಿದ್ದಾನೆ. ಪ್ರಜ್ಞೆ ಬಂದಾಗ ನಾನು ಆತನ ಸ್ನೇಹಿತನ ಜತೆ ನಗ್ನವಾಗಿ ಬಿದ್ದುಕೊಂಡಿದ್ದೆ. ಸಹಾಯಕ್ಕೆ ಕೂಗಿಕೊಂಡಾಗ ಒಳನುಗ್ಗಿ ಬಂದ ಗಂಡ ಸುಮ್ಮನಿರುವಂತೆ ಬೆದರಿಸಿದ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.
ಘಟನೆ ನಂತರ ಆಕೆ ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ನಾಗರಿಕ ವೇದಿಕೆಯ ಸಹಾಯ ಪಡೆದು, ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುವುದಕ್ಕೆ ಹೋಗುವಾಗಲೂ ಸ್ನೇಹಿತನೊಂದಿಗಿನ ವಿಡಿಯೋ ದೃಶ್ಯಗಳನ್ನು ತೋರಿಸಿ ಪತಿ ಅಕೆಗೆ ಬೆದರಿಸಿದ್ದಾನೆ. ಇದ್ಯಾವುದಕ್ಕೂ ಬೆದರದೇ ಗಂಡ ಮತ್ತು ಆತನ ಸ್ನೇಹಿತನ ವಿರುದ್ಧ ಅತ್ಯಾಚಾರ, ವಂಚನೆಗಳ ದೂರು ಕೊಟ್ಟಿದ್ದಾಳೆ.
ನನ್ನ ಪತಿಯೇ ಆತನ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ. ಈ ಮಾನಸಿಕ ಆಘಾತದಿಂದ ನನಗೆ ಹೊರಬರುವುದಕ್ಕೇ ಆಗುತ್ತಿಲ್ಲ’ ಎಂದಾಕೆ ದೂರಿನಲ್ಲಿ ಗೋಳು ತೋಡಿಕೊಂಡಿದ್ದಾರೆ.
Advertisement