ಪುರಿ ಜಗನ್ನಾಥ ದೇವಾಲಯದ ಬಗ್ಗೆ ಅವಹೇಳನಕಾರಿ ಬರಹ ಪ್ರಕಟ: ಕ್ಷಮೆಯಾಚಿಸಿದ ಏರ್ ಇಂಡಿಯಾ

ಪುರಿ ಜಗನ್ನಾಥ ದೇವಾಲಯದ ಬಗ್ಗೆ ತನ್ನ ನಿಯತಕಾಲಿಕದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕ್ಷಮೆ ಕೇಳಿದೆ....
ಪುರಿ ಜಗನ್ನಾಥ ದೇವಾಲಯ
ಪುರಿ ಜಗನ್ನಾಥ ದೇವಾಲಯ
Updated on

ಭುವನೇಶ್ವರ: ಪುರಿ ಜಗನ್ನಾಥ ದೇವಾಲಯದ ಬಗ್ಗೆ ತನ್ನ ನಿಯತಕಾಲಿಕದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕ್ಷಮೆ ಕೇಳಿದೆ.

ಏರ್ ಇಂಡಿಯಾ ವಿಮಾನದ ಶುಭ್ ಯಾತ್ರಾ ನಿಯತಕಾಲಿಕದಲ್ಲಿ ಪುರಿ ಜಗನ್ನಾಥ ದೇವಾಲಯದ ಅಡುಗೆ ಮನೆಯಲ್ಲಿ ಮಾಂಸಾಹಾರ ಖಾದ್ಯಗಳನ್ನು ತಯಾರಿಸಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಈ ಸಂಬಂಧ ಕ್ಷಮೆ ಯಾಚಿಸಿರುವ ಏರ್ ಇಂಡಿಯಾ ಕೂಡಲೇ ಜಾರಿಗೆ ಬರುವಂತೆ ಶುಭಯಾತ್ರಾ ನಿಯತಕಾಲಿಕದ ಎಲ್ಲಾ ಪ್ರತಿಗಳನ್ನು ರದ್ದುಗೊಳಿಸಿದೆ, ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.

ಏರ್ ಇಂಡಿಯಾದ ಶುಭ್ ಯಾತ್ರಾ ನಿಯತಕಾಲಿದಲ್ಲಿ 'Devotion Can Be Delicious' ಎಂಬ ಶೀರ್ಷಿಕೆಯಡಿ, ಲೇಖನ ಪ್ರಕಟಿಸಲಾಗಿತ್ತು.

ಪುರಿಯ ಜಗನ್ನಾಥ ದೇವಾಲಯದ ಅಡುಗೆ ಮನೆಯಲ್ಲಿ  ಸುಮಾರು ಒಂದು ಸಾವಿರ ಮಂದಿ ದಿನದ 24 ಗಂಟೆಯೂ ಅಡುಗೆ ತಯಾರಿಸುತ್ತಾರೆ,285 ಬಗೆಯ ಸಸ್ಯಹಾರಾ ಹಾಗೂ ಮಾಂಸಾಹಾರ ಖಾದ್ಯಗಳನ್ನು ಪ್ರತಿದಿನ ತಯಾರಿಸುತ್ತಾರೆ ಎಂದು ಬರೆಯಲಾಗಿತ್ತು.

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ನವೀನ್ ಪಟ್ನಾಯಕ್ ಇದೊಂದು ದುರಾದೃಷ್ಟಕರ ಘಟನೆ, ಪ್ರಕರಣ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com