ಆಡಿ ಕಾರ್
ದೇಶ
ಟೆಸ್ಟ್ ಡ್ರೈವ್ ನೆಪ: 40 ಲಕ್ಷ ಬೆಲೆಯ ಆಡಿ ಕಾರಿನೊಂದಿಗೆ ಪರಾರಿಯಾದ ಆಗಂತುಕ
ಹೈದರಾಬಾದ್ ನ ಬಂಜಾರಾ ಹಿಲ್ಸ್ ನ ಕಾರ್ ಶೋರೂಂಗೆ ಬಂದ ಆಗಂತುಕನೊಬ್ಬ ತಾನು ಓರ್ವ ವೈದ್ಯ. ಹೆಸರು ಗೌತಮ್ ರೆಡ್ಡಿ ಎಂದು ಪರಿಚಯಿಸಿಕೊಂಡು...
ಹೈದರಾಬಾದ್: ಹೈದರಾಬಾದ್ ನ ಬಂಜಾರಾ ಹಿಲ್ಸ್ ನ ಕಾರ್ ಶೋರೂಂಗೆ ಬಂದ ಆಗಂತುಕನೊಬ್ಬ ತಾನು ಓರ್ವ ವೈದ್ಯ. ಹೆಸರು ಗೌತಮ್ ರೆಡ್ಡಿ ಎಂದು ಪರಿಚಯಿಸಿಕೊಂಡು ಟೆಸ್ಟ್ ಡ್ರೈವ್ ನೆಪ ಹೇಳಿ 40 ಲಕ್ಷ ಬೆಲೆಯ ಆಡಿ ಕ್ಯೂ-3 ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿಡೆ.
ಬಂಜಾರಾ ಹಿನ್ಸ್ ನ ಶ್ರೀನಗರ ಕಾಲೋನಿಯಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಟ ಶೋರೂಂಗೆ ಆಗಮಿಸಿದ್ದ ಆಗಂತುಕ. ಆಡಿ ಕ್ಯೂ-3 ಕಾರನ್ನು ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿದ್ದಾನೆ. ಈ ವೇಳೆ ಶೋರೂಂನ ಸಿಬ್ಬಂದಿ ಕೂಡ ಕಾರಲ್ಲದ್ದ. ಕಾರನ್ನು ತನ್ನ ಸ್ನೇಹಿತರಿಗೆ ತೋರಿಸಿಕೊಂಡು ಬರುವುದಾಗಿ ಹೇಳಿ ಅಪೋಲೋ ಆಸ್ಪತ್ರೆ ಬಳಿ ಶೋರೂಂ ಸಿಬ್ಬಂದಿಯನ್ನು ಕೆಳಗಿಳಿಸಿ ಹೋಗಿದ್ದಾನೆ.
ಈ ಬಗ್ಗೆ ಶೋರೂಂ ಮಾಲೀಕರು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ