ಒಆರ್'ಒಪಿ ಸಂತೃಪ್ತಿ ಬಗ್ಗೆ ರಕ್ಷಣಾ ಅಧಿಕಾರಿಗಳನ್ನು ಕೇಳಿ: ಕೇಂದ್ರಕ್ಕೆ ದಿಗ್ವಿಜಯ್ ಸಿಂಗ್

ಸಮಾನ ವೇತನ ಮತ್ತು ಸಮಾನ ಪಿಂಚಣಿ ಬಗೆಗಿನ ಸಂತೋಷ ಹಾಗೂ ಸಂತೃಪ್ತಿ ಬಗ್ಗೆ ರಕ್ಷಣಾ ಅಧಿಕಾರಿಗಳನ್ನು ಕೇಳಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್...
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್

ನವದೆಹಲಿ: ಸಮಾನ ವೇತನ ಮತ್ತು ಸಮಾನ ಪಿಂಚಣಿ ಬಗೆಗಿನ ಸಂತೋಷ ಹಾಗೂ ಸಂತೃಪ್ತಿ ಬಗ್ಗೆ ರಕ್ಷಣಾ ಅಧಿಕಾರಿಗಳನ್ನು ಕೇಳಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.

ನಿನ್ನೆಯಷ್ಟೇ ಸಮಾನ ವೇತನ ಮತ್ತು ಸಮಾನ ಪಿಂಚಣಿ ಬಗ್ಗೆ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, "ನಾನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾಗ ಸಮಾನ ವೇತನ ಮತ್ತು ಸಮಾನ ಪಿಂಚಣಿ ಜಾರಿ ಮಾಡುವ ಭರವಸೆಯನ್ನು ನೀಡಿದ್ದೆ. ಆದರೆ ಅಂದು ಅಧಿಕಾರದಲ್ಲಿದ್ದವರಿಗೆ ಸಮಾನ ವೇತನ ಮತ್ತು ಸಮಾನ ಪಿಂಚಣಿ ಏನು ಎಂಬುದೇ ತಿಳಿದಿರಲಿಲ್ಲ.
 
ಕೇಂದ್ರ ಸರ್ಕಾರಕ್ಕೆ ಸಮಾನ ವೇತನ ಮತ್ತು ಸಮಾನ ಪಿಂಚಣಿ ಮೊತ್ತವನ್ನು ಒಂದೇ ಬಾರಿಗೆ ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ನಿವೃತ್ತ ಯೋಧರಿಗೆ ನಾಲ್ಕು ಕಂತುಗಳಲ್ಲಿ ಸಮಾನ ವೇತನ ಮತ್ತು ಸಮಾನ ಪಿಂಚಣಿ ಸ್ವೀಕರಿಸುವಂತೆ ಮನವಿ ಮಾಡಿದೆ, ಈ ಪೈಕಿ ಈಗಾಗಲೇ ಮೊದಲನೇ ಕಂತನ್ನು ಪಾವತಿ ಮಾಡಲಾಗಿದೆ ಎಂದು ಹೇಳಿದ್ದರು.

ಈ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ ಸಿಂಗ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಪ್ರಧಾನಮಂತ್ರಿಯಾಗಲೀ ಈ ರೀತಿಯಾಗಿ ಮಾತನಾಡುವುದಿಲ್ಲ. ಸಮಾನ ವೇತನ ಮತ್ತು ಸಮಾನ ಪಿಂಚಣಿ ಸಂತಸವನ್ನು ತಂದಿದೆಯೇ ಎಂದು ರಕ್ಷಣಾ ಅಧಿಕಾರಿಗಳನ್ನು ಹೋಗಿ ಕೇಳಿ. ಒಆರ್'ಒಪಿ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಮೊದಲು ವಿಕಲಚೇತನರಿಗೆ ನೀಡುತ್ತಿರುವ ಪಿಂಚಣಿಯನ್ನು ಕಡಿತ ಮಾಡಿರುವುದಕ್ಕೆ ಜನರ ಬಳಿ ಕ್ಷಮೆಯಾಚಿಸಬೇಕಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com