ಆನ್ ಲೈನ್ ಜಾಗೃತಿ ಎಫೆಕ್ಟ್; ಚೀನಾ ವಸ್ತುಗಳ ಮಾರಾಟದಲ್ಲಿ ಗಣನೀಯ ಇಳಿಕೆ!

ಚೀನಾ ವಸ್ತುಗಳನ್ನು ಖರೀದಿಸದಂತೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆನ್ ಲೈನ್ ಜಾಗೃತಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಚೀನಾ ವಸ್ತುಗಳ ಮಾರಾಟ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಮೇಡ್ ಇನ್ ಚೀನಾ ವಸ್ತುಗಳು (ಸಂಗ್ರಹ ಚಿತ್ರ)
ಮೇಡ್ ಇನ್ ಚೀನಾ ವಸ್ತುಗಳು (ಸಂಗ್ರಹ ಚಿತ್ರ)
Updated on

ನವದೆಹಲಿ: ಚೀನಾ ವಸ್ತುಗಳನ್ನು ಖರೀದಿಸದಂತೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆನ್ ಲೈನ್ ಜಾಗೃತಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಚೀನಾ ವಸ್ತುಗಳ ಮಾರಾಟ ಪ್ರಮಾಣ  ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು, ಕಳೆದ ಬಾರಿಯ ದೀಪಾವಳಿಗೆ ಹೋಲಿಕೆ ಮಾಡಿದರೆ ಈ ಬಾರಿಯ ದೀಪಾವಳಿಯಲ್ಲಿ ಚೀನಾ ವಸ್ತುಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ  ಕುಸಿದಿದೆ ಎಂದು ಹೇಳಿದೆ. ಗೋವಾದ ಪ್ರಮುಖ ಮಾರುಕಟ್ಟೆ ಪಣಜಿಯಲ್ಲಿ ಪ್ರತೀ ವರ್ಷ ಜಗಮಗಿಸುತ್ತಿದ್ದ ಮೇಡ್ ಇನ್ ಚೀನಾ ದೀಪಗಳು ಈ ಬಾರಿ ಗ್ರಾಹಕರ ಮನಗೆಲ್ಲುವಲ್ಲಿ ವಿಫಲವಾಗಿದ್ದು,  ದೇಶೀ ನಿರ್ಮಿತ ವಸ್ತುಗಳತ್ತ ಗ್ರಾಹಕರು ಹೆಚ್ಚಾಗಿ ಒಲವು ತೋರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಳೆದ ಹಲವು ದಿನಗಳಿಂದ ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧ ನಡೆಯುತ್ತಿರುವ ಆನ್ ಲೈನ್ ಜಾಗೃತಿ ಪರಿಣಾಮ, ನಿಜಕ್ಕೂ ಚೀನಾ ವಸ್ತುಗಳ ಮೇಲಾಗಿದ್ದು, ಇವುಗಳ ಮಾರಾಟ ಗಣನೀಯ  ಪ್ರಮಾಣದಲ್ಲಿ ಕುಸಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಮುಖವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತ ನಡೆಸಿದ್ದ ಸೀಮಿತ ದಾಳಿ ಬಳಿಕವೂ ಚೀನಾ  ಪಾಕಿಸ್ತಾನ ಬೆನ್ನಿಗೆ ನಿಂತ ಪರಿಣಾಮ ಚೀನೀ ವಸ್ತುಗಳಿಂದ ಗ್ರಾಹಕರು ವಿಮುಖರಾಗಿದ್ದಾರೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರಂತೆ.

ಈ ಬಗ್ಗೆ ಮಾತನಾಡಿರುವ ಪಣಜಿ ಮಾರುಕಟ್ಟೆಯ ಮಾರಾಟಗಾರರೊಬ್ಬರು ಗ್ರಾಹಕರು ಮೊದಲಿನಂತೆ ಚೀನೀ ವಸ್ತುಗಳತ್ತ ಆಕರ್ಷಿತರಾಗುತ್ತಿಲ್ಲ. ವಸ್ತುಗಳನ್ನು ಕೈಗೆತ್ತಿಕೊಳ್ಳುವ ಮೊದಲೇ  ಚೀನಾ ವಸ್ತುಗಳಾದರೆ ಬೇಡ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕಳೆದ ವರ್ಷದ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದ್ದ ಚೀನಾ ನಿರ್ಮಿತ ಲಾಟೀನುಗಳು, ಗಾಜಿನ ದೀಪಗಳು, ಲ್ಯಾಂಪ್ ಗಳು  ಹಾಗೂ ತೂಗು ದೀಪಗಳು ಗ್ರಾಹಕರ ಬೇಡಿಕೆ ಇಲ್ಲದೇ ಹಾಗೆಯೇ ಉಳಿದುಕೊಂಡಿವೆ ಎಂದು ಹೇಳಿದ್ದಾರೆ.

ಕೇವಲ ಇವುಗಳು ಮಾತ್ರವಲ್ಲದೇ ಚೀನಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ವಿದ್ಯುನ್ಮಾನ ಅಲಂಕಾರಿಕ ವಸ್ತುಗಳಿಗೂ ಕೂಡ ಗ್ರಾಹಕರ  ಬೇಡಿಕೆ ಇಲ್ಲದಂತಾಗಿದೆ.

ಒಟ್ಟಾರೆ ಆ್ಯಂಟಿ ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧ ಜಾಗೃತಿ ಫಲಕಾರಿಯಾಗಿದ್ದು, ಇದೇ ಜಾಗೃತಿ ಮತ್ತಷ್ಟು ದಿನಗಳ ಕಾಲ ಮುಂದುವರೆದು ಸಂಪೂರ್ಣವಾಗಿ ಚೀನಾ ವಸ್ತುಗಳು ಭಾರತದಲ್ಲಿ  ಮಾರುಕಟ್ಟೆ ಕಳೆದುಕೊಳ್ಳಬೇಕು ಎಂದು ಜಾಗೃತಿದಾರರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com