ಚೀನಾ ಪಟಾಕಿಗೆ "ಮೇಡ್ ಇನ್ ಇಂಡಿಯಾ" ಲೇಬಲ್!

ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧದ ಆನ್ ಲೈನ್ ಜಾಗೃತಿಗೆ ಬೇಸ್ತು ಬಿದ್ದಿರುವ ಪಟಾಕಿ ಮಾರಾಟಗಾರರು ಮಾರಾಟವಾಗದೇ ಉಳಿದ ಚೀನಾ ಪಟಾಕಿ ಬಾಕ್ಸ್ ಗಳಿಗೆ ಮೇಡ್ ಇನ್ ಇಂಡಿಯಾ ಲೇಬಲ್ ಅಂಟಿಸುವ ಮೂಲಕ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧದ ಆನ್ ಲೈನ್ ಜಾಗೃತಿಗೆ ಬೇಸ್ತು ಬಿದ್ದಿರುವ ಪಟಾಕಿ ಮಾರಾಟಗಾರರು ಮಾರಾಟವಾಗದೇ ಉಳಿದ ಚೀನಾ ಪಟಾಕಿ ಬಾಕ್ಸ್ ಗಳಿಗೆ ಮೇಡ್  ಇನ್ ಇಂಡಿಯಾ ಲೇಬಲ್ ಅಂಟಿಸುವ ಮೂಲಕ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಚೀನಾ ನಿರ್ಮಿತ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಒತ್ತಾಯದಿಂದಾಗಿ ದೀಪಾವಳಿ ಹಬ್ಬಕ್ಕಾಗಿ ಚೀನಾದಿಂದ ತರಿಸಿದ್ದ ಭಾರೀ ಪ್ರಮಾಣದ ಪಟಾಕಿಗಳಿಗೆ ಬೇಡಿಕೆ ಕುಸಿದಿದ್ದು, ಚೀನಾ  ವಸ್ತುಗಳನ್ನು ನಿಷೇಧಿಸಬೇಕು ಎನ್ನುವ ಆನ್ ಲೈನ್ ಜಾಗೃತಿಯಿಂದಾಗಿ ಮಾರುಕಟ್ಟೆಯಲ್ಲಿ ಚೀನಾ ನಿರ್ಮಿತ ಪಟಾಕಿಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ  ಮಾರಾಟವಾಗದೇ ಉಳಿದಿರುವ ಚೀನಾ ಪಟಾಕಿಗಳನ್ನು ಮಾರಲು ಮಾರಾಟಗಾರರು ಚಾಣಾಕ್ಷತನ ಮೆರೆದಿದ್ದು, ಚೀನಾ ಪಟಾಕಿ ಬಾಕ್ಸ್ ಗಳಿಗೆ ಮೇಡ್ ಇಂಡಿಯಾ ಲೇಬಲ್ ಗಳನ್ನು ಅಂಟಿಸುವ  ಮೂಲಕ ಚೀನಾ ಪಟಾಕಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಗೋವಾದ ಪಣಜಿ, ಚೆನ್ನೈ ಹಾಗೂ ಮತ್ತಿತರ ಪ್ರಮುಖ ನಗರಗಳಲ್ಲಿ  ಮೇಡ್‌ ಇನ್‌ ಇಂಡಿಯಾ ಲೇಬಲ್‌ ಹೊಂದಿರುವ ಚೀನಾ ಪಟಾಕಿಗಳನ್ನು  ಮಾರಾಟ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ದೀಪಾವಳಿ ಹಬ್ಬಕ್ಕಿಂತ ಕೆಲ ತಿಂಗಳಗಳ ಮೊದಲೇ ಚೀನಾ ಪಟಾಕಿಗಳು ಮಾರುಕಟ್ಟೆಗೆ ಬರಲಾರಂಭಿಸಿತ್ತು.

ಕಡಿಮೆ ದರಕ್ಕೆ ದೊರೆಯುವ ಈ ಪಟಾಕಿಗಳನ್ನು ಸ್ಥಳೀಯ ಸಗಟು ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ಖರೀದಿಸಿ, ತಮ್ಮ ತಮ್ಮ ಗೋದಾಮುಗಳಲ್ಲಿ ದಾಸ್ತಾನು ಇಟ್ಟು ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ  ಬಿಡುಗಡೆ ಮಾಡುತ್ತಿದ್ದರು. ಆದರೆ ಈ ಬಾರಿ ಚೀನಾ ವಸ್ತುಗಳಿಗೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಅದೇ ಬಾಕ್ಸ್ ಗಳಿಗೆ ಮೇಡ್ ಇನ್ ಇಂಡಿಯಾ ಲೇಬಲ್ ಅಂಟಸಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಕಾರ್ಯಕ್ಕೆ ಮಾರಾಟಗಾರರು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com