
ವಿಜಯವಾಡ: ಜೈಲಿನಲ್ಲಿ ಮುಸ್ಲಿಂ ಕೈದಿಗಳೇ ಪರಾರಿಯಾಗುತ್ತಿದ್ದು, ಹಿಂದೂ ಕೈದಿಗಳು ಮಾತ್ರ ಏಕೆ ಪರಾರಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ ವಿರುದ್ಧ ನಾನು ಹೋರಾಟ ಮಾಡುತ್ತೇನೆ. ಮಧ್ಯಪ್ರದೇಶದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಮಿ ಉಗ್ರ ಸಂಘಟನೆ ಮೇಲೆ ನಿಷೇಧವನ್ನು ಹೇರಿದ್ದೆ. ನಂತರ ಉತ್ತರ ಪ್ರದೇಶದಲ್ಲಿ ರಾಜನಾಥ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು.
ಆದರೆ, ಅವರು ಎಂದಿಗೂ ಸಿಮಿ ಉಗ್ರ ಸಂಘಟನೆ ಮೇಲೆ ನಿಷೇಧವನ್ನು ಹೇರಿರಲಿಲ್ಲ. ಗಲಭೆ ಪ್ರಕರಣಗಳಲ್ಲಿ ಸಿಮಿ ಜೊತೆಗೆ ಭಜರಂಗ ದಳ ಕೂಡ ಕೈಜೋಡಿಸಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಈ ಸಾಕ್ಷ್ಯಾಧಾರಗಳ ಮೇಲೆಯೇ ಎನ್'ಡಿಎ ಸಿಮಿ ಉಗ್ರ ಸಂಘಟನೆ ಮೇಲೆ ನಿಷೇಧವನ್ನು ಹೇರಿತ್ತು ಎಂದು ಹೇಳಿದ್ದಾರೆ.
ನನಗೆ ಸಿಮಿ ಮೇಲೆ ಆಗಲಿ ಅಥವಾ ಬಜರಂಗದಳದ ಮೇಲೆಯೇ ಆಗಲಿ ಪ್ರೀತಿಯಿಲ್ಲ. ಗಲಭೆ ಸೃಷ್ಟಿಸುವ ಹಾಗೂ ಧರ್ಮ ಹೆಸರಿನಲ್ಲಿ ರಾಜಕೀಯ ಮಾಡುವವರ ವಿರುದ್ಧ ನಾನಿದ್ದೇನೆ. ಇದರಲ್ಲಿ ಓವೈಸಿ ಕೂಡ ಇದ್ದಾರೆ.
Advertisement