
ಪಣಜಿ: ಗೋವಾ ರಾಜ್ಯಕ್ಕೆ ಬಿಜೆಪಿಯಿಂದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ನಿತಿನ್ ಗಡ್ಕರಿ ಅವರಿಗೆ ಇದ್ದ ಮೊದಲ ಕೆಲಸವೆಂದರೆ ಅದು ನನ್ನನ್ನು ವಜಾಗೊಳಿಸುವುದಾಗಿತ್ತು ಎಂದು ಸುಭಾಷ್ ವೆಲಿಂಗ್ಕರ್ ಆರೋಪಿಸಿದ್ದಾರೆ.
ಗೋವಾದಲ್ಲಿ ಆರ್ ಎಸ್ ಎಸ್ ಗೆ ಪರ್ಯಾಯವಾಗಿ ಪ್ರಾರಂಭಿಸಿರುವ ಸಂಘಟನೆ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ಹೇಳಿರುವ ವೆಲಿಂಗ್ಕರ್, ಮುಂಬರುವ ವಿಧಾನಸಭಾ ಚುನಾವಣೆಗೆ ನಿತಿನ್ ಗಡ್ಕರಿ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಅವರಿಗೆ ನನ್ನನ್ನು ವಜಾಗೊಳಿಸುವ ಕೆಲಸ ವಹಿಸಲಾಗಿತ್ತು ಇದಕ್ಕೆ ಮನೋಹರ್ ಪರಿಕ್ಕರ್ ಅವರ ಒತ್ತಡವೇ ಕಾರಣ ಎಂದು ವೆಲಿಂಗ್ಕರ್ ಆರೋಪಿಸಿದ್ದಾರೆ.
ತಮ್ಮನ್ನು ವಜಾಗೊಳಿಸಿರುವುದಕ್ಕೂ ಆರ್ ಎಸ್ ಎಸ್ ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ವೆಲಿಂಗ್ಕರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಶಿಕ್ಷಣ ಮಾಧ್ಯಮದ ಸಂಬಂಧ ತಮ್ಮ ನಿಲುವಿಗೆ ಬೆಂಬಲ ನೀಡಿರುವ ಶಿವಸೇನೆಗೆ ಧನ್ಯವಾದ ತಿಳಿಸಿದ್ದಾರೆ.
Advertisement