
ನವದೆಹಲಿ: ಸಚಿವ ಸ್ಥಾನಕ್ಕೆ ಕುತ್ತು ತಂದ ಆಪ್ ಶಾಸಕ ಸಂದೀಪ್ ಕುಮಾರ್ ಅವರ ಸೆಕ್ಸ್ ಟೇಪ್ ಇತ್ತೀಚಿನದಲ್ಲ, ತುಂಬಾ ವರ್ಷಗಳ ಹಿಂದಿನದ್ದು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಬಗ್ಗೆ ಸ್ವತಃ ಮಾಜಿ ಸಚಿವ ಸಂದೀಪ್ ಕುಮಾರ್ ಅವರ ಆಪ್ತರು ಖಾಸಗಿ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಆ ಟೇಪ್ ಕನಿಷ್ಠ 6ರಿಂದ7 ವರ್ಷಗಳ ಹಿಂದಿನ ಟೇಪ್ ಎಂದು ಹೇಳಿಕೊಂಡಿದ್ದಾರೆ ಎಂದು ವಾಹಿನಿ ವರದಿ ಮಾಡಿದೆ. ಪ್ರಸ್ತುತ ಚಾನೆಲ್ ಗಳಲ್ಲಿ ಪ್ರಸಾವಾಗುತ್ತಿರುವ ಟೇಪ್ 6 ರಿಂದ 7 ವರ್ಷಗಳಷ್ಟು ಹಿಂದಿನದ್ದಾಗಿದ್ದು, ತಾವು ಸಾರ್ವಜನಿಕ ಬದುಕಿಗೆ ಬರುವ ಮುನ್ನವೇ ಅಂದರೆ ತಾವು ವಿದ್ಯಾರ್ಥಿಗಿದ್ದ ಸಂದರ್ಭದಲ್ಲಿ ತೆಗೆಯಲಾಗಿದ್ದ ವಿಡಿಯೋ ಅದು ಎಂದು ಹೇಳಿಕೊಂಡಿದ್ದಾರೆ.
ತಾವು ಕಾನೂನು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತೆಗೆಯಲಾಗಿದ್ದ ವಿಡಿಯೋ ಆದಾಗಿದ್ದು, ಸೆಲ್ಫೀ ಫೋಟೋಗಳೂ ಕೂಡ ಲೀಕ್ ಆಗಿವೆ ಎಂದು ಸಂದೀಪ್ ಕುಮಾರ್ ಆಪ್ತರು ಮಾದ್ಯಮದೊಂದಿಗೆ ಹೇಳಿಕೊಂಡಿದ್ದಾರೆ. ಪ್ರಸ್ತುತ ವಿಡಿಯೋ ಲೀಕ್ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿರುವ ಸಂದೀಪ್ ಕುಮಾರ್ ತಮಗೆ ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಆಪ್ ಶಾಸಕ ಸಂದೀಪ್ ಕುಮಾರ್ ಅವರ ಸೆಕ್ಸ್ ವಿಡಿಯೋ ತಮ್ಮ ಕೈ ಸೇರುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅವರನ್ನು ಮಂತ್ರಿಗಿರಿಯಿಂದ ವಜಾಗೊಳಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಇಂತಹ ಘಟನೆಗಳೆಲ್ಲ ಸಹಿಸಲಸಾಧ್ಯ. ನಮ್ಮ ನೈತಿಕತೆ ಕುರಿತಂತೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲು ತಾವು ಸಿದ್ಧರಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದರು.
Advertisement