

ದಹೋದ್(ಗುಜರಾತ್): ರೈಲು ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ತಾಯಿಯೊಬ್ಬರು ಮಗುವಿನ ಜತೆ ಹಳಿ ದಾಟಲು ಮುಂದಾಗಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ.
ಗುಜರಾತ್ ದಾಹೋದ್ ಜಿಲ್ಲೆಯಲ್ಲಿ ರೈಲು ನಿಲ್ದಾಣವೊಂದರಲ್ಲಿ ಮಗುವನ್ನು ಕರೆದುಕೊಂಡು ಮಹಿಳೆಯೊಬ್ಬರು ಪ್ಲಾಟ್ ಫಾರ್ಮ್ ನಲ್ಲಿ ಹಳಿ ದಾಟಲು ಕೆಳಗೆ ಇಳಿದಿದ್ದಾರೆ. ಈ ವೇಳೆ ರೈಲು ವೇಗವಾಗಿ ನಿಲ್ದಾಣಕ್ಕೆ ಬಂದಿದ್ದರಿಂದ ಹಳಿ ದಾಟಲಾಗದೆ ಮತ್ತೆ ಪ್ಲಾಟ್ ಫಾರ್ಮ್ ಗೆ ಹತ್ತಲು ಮುಂದಾಗಿದ್ದಾರೆ. ಅದರೆ ಅದು ಸಾಧ್ಯವಾಗಿಲ್ಲ. ಈ ವೇಳೆ ಅಲ್ಲೇ ಇದ್ದ ಪ್ರಯಾಣಿಕರೊಬ್ಬರು ಮಹಿಳೆಯನ್ನು ಹಿಡಿದು ಮೇಲಕ್ಕೆ ಹೇಳದಿದ್ದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಪೂರ್ಣ ಘಟನಾವಳಿ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯಾವಳಿಗಳು ಭಯಾನಕವಾಗಿದೆ.
Advertisement