ಬಹುಪತ್ನಿತ್ವ ನಿಷೇಧ ಅನೈತಿಕ ಲೈಂಗಿಕತೆಗೆ ಉತ್ತೇಜನ: ಸುಪ್ರಿಂಗೆ ಮುಸ್ಲಿಂ ಮಂಡಳಿ

ಅಖಿಲ ಭಾರತ ಮುಸ್ಲಿಂ ವೈಯಕ್ತಿ ಕಾನೂನು ಮಂಡಳಿ ಬಹುಪತ್ನಿತ್ವವನ್ನು ನಿಷೇಧಿಸಿ ಅನೈತಿಕ ಲೈಂಗಿಕತೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ಸುಪ್ರೀಂಕೋರ್ಟ್...
ಮುಸ್ಲಿಂ ಮಹಿಳೆಯರು
ಮುಸ್ಲಿಂ ಮಹಿಳೆಯರು
ನವದೆಹಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿ ಕಾನೂನು ಮಂಡಳಿ ಬಹುಪತ್ನಿತ್ವವನ್ನು ನಿಷೇಧಿಸಿ ಅನೈತಿಕ ಲೈಂಗಿಕತೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ. 
ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಪುರುಷರು ಹೊಂದಿರುವ ಕಾರಣ ಶರಿಯಾ ಅವರಿಗೆ ತ್ರಿವಳಿ ತಲಾಖ್ ಹಕ್ಕು ನೀಡಿದೆ. ಇನ್ನು ಪುರುಷರು ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದು, ಸರಿಯಾದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ ಎಂದು ಮಂಡಳಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ. 
ಇದೇ ವೇಳೆ ವೈಯಕ್ತಿಕ ಕಾನೂನುಗಳನ್ನು ಬದಲಾಯಿಸುವ ಹಕ್ಕು ನ್ಯಾಯಾಲಯಗಳಿಗೆ ಇಲ್ಲ. ಅಕಸ್ಮಾತ್ ಆ ಕಾರ್ಯಕ್ಕೆ ನ್ಯಾಯಾಲಯ ಮುಂದಾದರೆ, ಅದು ಭಾರತೀಯ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮುಸ್ಲಿಂ ಕಾನೂನು ಮಂಡಳಿ ಸುಪ್ರಿಂಕೋರ್ಟ್ ಗೆ ತಲಾಖ್ ಸಂಬಂಧ ನೀಡಿದ ಪ್ರತಿಕ್ರಿಯೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com