ನವದೆಹಲಿ: ಸಿಂಗಾಪುರದ ವಿಮಾನಯಾನ ಸಂಸ್ಥೆ ಸ್ಕೂಟ್ ಮುಂದಿನ ತಿಂಗಳಿನಿಂದ ಜೈಪುರದಿಂದ ಸಿಂಗಾಪುರಕ್ಕೆ ವಿಮಾನಯಾನ ಸೇನೆ ಆರಂಭಿಸಲಿದ್ದು, ಈ ವಿಮಾನಯಾನಕ್ಕೆ ಕಾಮಸ್ಕೂತ್ರ ಎಂಬ ಹೆಸರಿಡಲಾಗಿದೆ.
ದೇಶದಲ್ಲಿ ತನ್ನ ಸೇವಾಜಾಲವನ್ನು ವಿಸ್ತರಿಸಲು ಸ್ಕೂಟ್ ನಿರ್ಧರಿಸಿದ್ದು, ಅಕ್ಟೋಬರ್ 2ರಂದು ವಿಮಾನ ಮೊದಲ ಹಾರಾಟ ಪ್ರಾರಂಭಿಸಲಿದೆ. ಸ್ಕೂಟ್ ಸಂಸ್ಥೆಯು ಈಗಾಗಲೇ ಚೆನ್ನೈ ಮತ್ತು ಅಮೃತಸರದಿಂದ ಸಿಂಗಾಪುರಕ್ಕೆ ವಿಮಾನಯಾನ ಸೌಲಭ್ಯ ಒದಗಿಸುತ್ತಿದೆ.
ಕಾಮಸ್ಕೂತ್ರ ವಿಮಾನವು ಸಂಸ್ಥೆಯ ಭಾರತದ 12ನೇ ವಿಮಾನವಾಗಿದೆ. ಇದರಲ್ಲಿ 21 ಪ್ರೀಮಿಯಂ ಎಕಾನಮಿ ದರ್ಜೆ ಸೇರಿ 335 ಆಸನಗಳಿವೆ.