ಸೆಕ್ಸ್ ಸಿಡಿ ವಿವಾದ: ಸಂದೀಪ್ ಪರ ಅಶುತೋಷ್ ಹೇಳಿಕೆ ವೈಯಕ್ತಿಕವಾದದ್ದು- ಆಪ್ ಸ್ಪಷ್ಟನೆ

ಸೆಕ್ಸ್ ಸಿಡಿ ವಿವಾದ ಕುರಿತಂತೆ ಸಂದೀಪ್ ಕುಮಾರ್ ಅವರನ್ನು ಸಮರ್ಥಿಸಿ ಅಶುತೋಷ್ ನೀಡಿದ್ದ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಈ ಹೇಳಿಕೆ ಆಮ್ ಆದ್ಮಿ ಪಕ್ಷದ್ದಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ...
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
Updated on

ನವದೆಹಲಿ: ಸೆಕ್ಸ್ ಸಿಡಿ ವಿವಾದ ಕುರಿತಂತೆ ಸಂದೀಪ್ ಕುಮಾರ್ ಅವರನ್ನು ಸಮರ್ಥಿಸಿ ಅಶುತೋಷ್ ನೀಡಿದ್ದ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಈ ಹೇಳಿಕೆ ಆಮ್ ಆದ್ಮಿ ಪಕ್ಷದ್ದಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಸಂದೀಪ್ ಕುಮಾರ್ ಮಾಡಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸಂದೀಪ್ ಅವರನ್ನು ಸಮರ್ಥಿಸಿ ಅಶುತೋಷ್ ಅವರು ನೀಡಿದ್ದ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಈ ಹೇಳಿಕೆಗೂ ಆಮ್ಮ ಆದ್ಮಿ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಂದೀಪ್ ಕುಮಾರ್ ವರ್ತನೆ ಬಗ್ಗೆ ಪಕ್ಷವು ಈಗಾಗಲೇ ಕ್ರಮವನ್ನು ಕೈಗೊಂಡಿದ್ದಾಗಿದೆ. ನಾಳೆ ನನ್ನ ವಿರುದ್ಧ ಆರೋಪಗಳು ಕೇಳಿದರೂ ಪಕ್ಷ ಇದೇ ರೀತಿಯ ಕ್ರಮಕೈಗೊಳ್ಳಲಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಶಿಸ್ತು ಸಮಿತಿಗೆ ವಹಿಸಲಾಗಿದೆ. ಪ್ರಸ್ತುತ ಪ್ರಕರಣ ತನಿಖಾ ಹಂತದಲ್ಲಿದ್ದು, ಸಮಿತಿ ತೆಗೆದುಕೊಳ್ಳುವ ನಿರ್ಧಾರದಂತೆ ನಡೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಸೆಕ್ಸ್ ಟೇಪ್ ಹಗರಣ ಸಂಬಂಧಿಸಿದಂತೆ ಮಾಜಿ ಸಚಿವ ಸಂದೀಪ್ ಕುಮಾರ್ ಅವರನ್ನು ಈ ಹಿಂದೆ ಸಮರ್ಥಿಸಿಕೊಂಡಿದ್ದ ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್ ಅವರು, ಸೆಕ್ಸ್ ಜೀವನದ ಒಂದು ಭಾಗ ವಾಗಿದೆ. ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಇದಾಗಿದೆ. ಭಾರತೀಯ ಇತಿಹಾಸದಲ್ಲಿ ನಮ್ಮ ನಾಯಕರು, ಹೀರೋಗಳು ಸಾಮಾಜಿಕ ಚೌಕಟ್ಟನ್ನು ಮೀರಿ ಅವರಿಗೆ ಇಷ್ಟವಿದ್ದವರೊಂದಿಗೆ ಇದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿದ್ದರು.

ನೆಹರು ಹಾಗು ಎಡ್ವಿನಾ ಮೌಂಟ್ ಬ್ಯಾಟನ್ ಅವರ ಸಂಬಂಧದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತಿತ್ತು. ಅವರಿಬ್ಬರ ನಡುವಿನ ಪ್ರೀತಿ ನೆಹರು ಕೊನೆಯುಸಿರೆಳೆಯುವವರೆಗೂ ಇತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿವಾಹವಾಗದೆ ಇದ್ದರು ತಾವು ಬ್ರಹ್ಮಚಾರಿಯಲ್ಲ ಎಂದು ಸಂಸತ್ ನಲ್ಲಿಯೇ ಹೇಳಿದ್ದರು. ಅವರು ತಮ್ಮ ಸ್ನೇಹಿತೆಯೊಂದಿಗೆ ಜೀವಿಸಿದ್ದರು ಸಮಾಜ ಅದನ್ನು ಆಕ್ಷೇಪಿಸಲಿಲ್ಲ. ಆದ್ದರಿಂದ ಸೆಕ್ಸ್ ಜೀವನದ ಭಾಗವಾಗಿದೆ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com