ನೆಹರು ಅವರನ್ನು ಹಾಡಿಹೊಗಳಿದ ಬಿಜೆಪಿ ಸಂಸದ ವರುಣ್ ಗಾಂಧಿ

ಭಾರತಕ್ಕಾಗಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಬಿಜಿಪಿ ಸಂಸದ ವರುಣ್ ಗಾಂಧಿ ಹೊಗಳಿದ್ದಾರೆ....
ವರುಣ್ ಗಾಂಧಿ
ವರುಣ್ ಗಾಂಧಿ
Updated on

ಲಕ್ನೋ: ಭಾರತಕ್ಕಾಗಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಬಿಜಿಪಿ ಸಂಸದ ವರುಣ್ ಗಾಂಧಿ ಹೊಗಳಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಯುವ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜವಹರ್ ಲಾಲ್ ನೆಹರು ಐಷಾರಾಮಿ ಜೀವನ ನಡೆಸುತ್ತಿದ್ದರೆಂಬ ಕಲ್ಪನೆ ಜನರಲ್ಲಿದೆ. ಆದರೆ, ಅವರು ಅದನ್ನು ಸಾಧಿಸಲು 15 ವರ್ಷಗಳ ಕಾಲ ಜೈಲಿನಲ್ಲಿರಬೇಕಾಯಿತು. ನೀನು 15 ವರ್ಷ ಜೈಲಲ್ಲಿರು, ನಂತರ ದೇಶದ ಪ್ರಧಾನಿ ಮಾಡುತ್ತೇವೆ ಎಂದರೆ ನಾನು ಅದನ್ನು ಒಪ್ಪಲು ತಯಾರಿಲ್ಲ. ಈ ಸ್ವಾತಂತ್ರ್ಯ ಯಾವುದೇ ಕಾರಣಕ್ಕೂ ದುರ್ಬಳಕೆ ಆಗಬಾರದು ಎಂದು ವರುಣ್ ಗಾಂಧಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಎಡದಲ್ಲಿ ನೆಹರು ಮತ್ತು ಚಿತ್ತರಂಜನ್ ದಾಸ್ ಪ್ರಮುಖವಾಗಿದ್ದರೆ, ಬಲದಲ್ಲಿ ಲಾಲಾ ಲಜಪತ್ ರಾಯ್ ಮುಂಚೂಣಿಯಲ್ಲಿದ್ದರು. ಅವರೆಲ್ಲರ ಸಿದ್ಧಾಂತಗಳು ವಿಭಿನ್ನವಾಗಿದ್ದವು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com