ಸೆಕ್ಸ್ ಸಿಡಿ: ಆಪ್ ಉಚ್ಚಾಟಿತ ಶಾಸಕ ಸಂದೀಪ್ ಕುಮಾರ್ ವಿರುದ್ಧ ಮಹಿಳೆ ದೂರು

ಸೆಕ್ಸ್ ಸಿಡಿ ಬಹಿರಂಗಗೊಂಡ ನಂತರ ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಶಾಸಕ ಸಂದೀಪ್ ಕುಮಾರ್ ಅವರಿಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ...
ಸಂದೀಪ್ ಕುಮಾರ್
ಸಂದೀಪ್ ಕುಮಾರ್
ನವದೆಹಲಿ: ಸೆಕ್ಸ್ ಸಿಡಿ ಬಹಿರಂಗಗೊಂಡ ನಂತರ ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಶಾಸಕ ಸಂದೀಪ್ ಕುಮಾರ್ ಅವರಿಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಇದೀಗ ಆ ಸೀಡಿಯಲ್ಲಿರುವ ಮಹಿಳೆ ಆಪ್ ಮಾಜಿ ಸಚಿವರ ವಿರುದ್ಧ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ರೇಷನ್ ಕಾರ್ಡ್ ಪಡೆಯಲು ಸಹಾಯ ಕೋರಿ ನಾನು ಸಚಿವರ ಬಳಿ ಹೋಗಿದ್ದೆ. ಈ ವೇಳೆ ಅವರು ನನಗೆ ಮತ್ತು ಬರುವ ಪಾನೀಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಅವರು ಸಚಿವರಾದಮೇಲೆಯೇ ಆ ಸಿಡಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಸಂದೀಪ್ ಕುಮಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಳಿಸಿದ ಬೆನ್ನಲ್ಲೇ ಮಹಿಳೆ ಅವರ ವಿರುದ್ಧ ದೂರು ನೀಡಿದ್ದಾರೆ.
ಕಳೆದ ಬುಧವಾರ ಸಂದೀಪ್‌ ಕುಮಾರ್ ಅವರು ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಿರುವ ಸಿಡಿಯೊಂದು ಬಹಿರಂಗವಾಗುತ್ತಿದ್ದಂತೆ ಸಿಎಂ ಕೇಜ್ರಿವಾಲ್‌ ಅವರು ಸಂದೀಪ್‌ ಅವರನ್ನು ತಮ್ಮ ಸಂಪುಟದಿಂದ ವಜಾ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com