ರಾಜಸ್ತಾನ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ; ಬಾಂಬ್ ನಿಷ್ಕ್ರಿಯ ದಳ ದೌಡು

ರಾಜಸ್ತಾನದ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಸ್ಫೋಟಕಗಳು ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.
ರಾಜಸ್ತಾನ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ (ಸಂಗ್ರಹ ಚಿತ್ರ)
ರಾಜಸ್ತಾನ ರೈಲ್ವೇ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ (ಸಂಗ್ರಹ ಚಿತ್ರ)

ಕೋಟಾ: ರಾಜಸ್ತಾನದ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಸ್ಫೋಟಕಗಳು ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.

ರಾಜಸ್ತಾನದ ಕೋಟಾ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಂಬರ್ 1ರಲ್ಲಿ ಸ್ಫೋಟಕಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಬ್ಯಾಗ್ ವೊಂದರಲ್ಲಿ ಸ್ಫೋಟಕಗಳನ್ನು ತುಂಬಿ  ಹುದುಗಿಸಿಡಲಾಗಿದೆ ಎಂದು ಹೇಳಲಾಗುತ್ತಿದೆ. ರೈಲ್ವೇ ನಿಲ್ದಾಣದಲ್ಲಿ ಇಂದು ಸಂಜೆ ಸುಮಾರು 5 ಗಂಟೆ ಸುಮಾರಿನಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಕಸ ಗುಡಿಸುವಾಗ ಅನುಮಾನಾಸ್ಪದ ಬ್ಯಾಗ್  ಪತ್ತೆಯಾಗಿದ್ದು, ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಸ್ಫೋಟಕಗಳು ಇರುವ ಮಾಹಿತಿ ತಿಳಿದುಬಂದಿದೆ.

ಕೂಡಲೇ ರೈಲ್ವೇ ಸಿಬ್ಬಂದಿಗಳು ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿರುವ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬ್ಯಾಗ್ ಅನ್ನು ನಿರ್ಜನ ಪ್ರದೇಶಕ್ಕೆ ಒಯ್ದು  ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ ಸ್ಫೋಟಕ ಪತ್ತೆಯಾಗಿರುವ ಫ್ಲಾಟ್ ಫಾರಂ ನಂಬರ್ 1 ಅನ್ನು ಸಂಪೂರ್ಣ ಭದ್ರತಾ ಸಿಬ್ಬಂದಿಗಳ ವಶಕ್ಕೆ ನೀಡಲಾಗಿದ್ದು, ಸಿಬ್ಬಂದಿಗಳು ಶೋಧ ನಡೆಸುತ್ತಿದ್ದಾರೆ.

ಬ್ಯಾಗ್ ನಲ್ಲಿರುವ ಶಂಕಿತ ವಸ್ತು ಸ್ಫೋಟಕ ಎಂದು ತಿಳಿದುಬಂದಿದ್ದರೂ, ಅದು ಯಾವ ರೀತಿಯ ಸ್ಫೋಟಕ ಮತ್ತು ಅದರ ಪರಿಣಾಮ ಎಷ್ಟು ಎಂಬುದರ ಕುರಿತು ಪೊಲೀಸರು ಈ ವರೆಗೂ ಮಾಹಿತಿ  ನೀಡಿಲ್ಲ. ಪ್ರಸ್ತುತ ಸ್ಫೋಟಕ ಪತ್ತೆ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದು, ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com