

ನವದೆಹಲಿ: ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಾಯಿಯ ಬಾಲವಿದ್ದಂತೆ, ಅದನ್ನೂ ಎಂದಿಗೂ ನೇರ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಸುದ್ದಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಸ್ವಾಮಿ ಮೆಹಬೂಬಾ ಮುಫ್ತಿ ಅವರನ್ನ ಹೀಗಳೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೆಹಬೂಬ ಮುಫ್ತಿ ಅವರಿಗೆ ಭಯೋತ್ಪದಕರ ಜೊತೆ ಹಳೇಯ ನಂಟಿದೆ. ಬದಲಾಗಬಹುದೆಂಬ ನಂಬಿಕೆಯಿಂದ ಬಿಜೆಪಿ ಆಕೆಯ ಜೊತೆ ಮೈತ್ರಿ ಮಾಡಿಕೊಂಡಿತು ಎಂದು ಹೇಳಿದ್ದಾರೆ.
ಜುಲೈ 8 ರಂದು ಉಗ್ರ ಬುರ್ವಾನ್ ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಉಂಟಾದ ಹಿಂಸಾಚಾರವನ್ನು ತಡೆಗಟ್ಟಿ ಶಾಂತಿ ಸ್ಥಾಪಿಸಲು ಪಿಡಿಪಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಪ್ರಯತ್ನ ಪಡುತ್ತಿದೆ ಎಂದು ಅವರು ಹೇಳಿದ್ದಾರೆ.