ಕೋಲ್ಕತ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ಹೆಚ್ಚಿದ ಭದ್ರತೆ

ಕೋಲ್ಕತಾದ ನೇತಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಬುಧವಾರ ತಿಳಿದುಬಂದಿದೆ...
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು (ಸಂಗ್ರಹ ಚಿತ್ರ)

ಕೋಲ್ಕತ: ಕೋಲ್ಕತಾದ ನೇತಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಬುಧವಾರ ತಿಳಿದುಬಂದಿದೆ.

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಬೆಳಿಗ್ಗೆ 1.24 ಸುಮಾರಿಗೆ ಕರೆ ಮಾಡಿರುವ ಅನಾಮಿಕ ವ್ಯಕ್ತಿಯೊಬ್ಬ ಮಾನವ ಬಾಂಬ್ ಸ್ಫೋಟಿಸುವಾಗಿ ಬೆದರಿಕೆ ಹಾಕಿದ್ದಾನೆಂದು ಹೇಳಲಾಗುತ್ತಿದೆ.

ಭದ್ರತಾ ಸಿಬ್ಬಂದಿಗೆ ಕರೆ ಮಾಡಿರುವ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ಆತನ ಹೆಸರು ಅರ್ಶದ್ ಎಂದು ಹೇಳಲಾಗುತ್ತಿದೆ.

ಕರೆ ಬಂದ ಕೂಡಲೇ ಕಂಟ್ರೋಲ್ ಸಿಬ್ಬಂದಿಗಳಿಗೆ ರಾಜ್ಯ ಸಚಿವಾಲಯದ ನಬನ್ನಾದಲ್ಲಿನ ಸಿಬ್ಬಂದಿಗಳನ್ನು ಹಾಗೂ ಬಿದಾನನಗರದ ಕಮಿಷನರಟೇ ಅಧಿಕಾರಿಗಳೆ ಮಾಹಿತಿ ನೀಡಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಸ್ಥಳಕ್ಕಾಗಮಿಸಿದ ಯೋಧರು ವಿಮಾನ ನಿಲ್ದಾಣದಾದ್ಯಂತ ತೀವ್ರ ತಪಾಸಣೆ ನಡೆಸಿದರು.

ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಾಹನಗಳನ್ನು ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸಿದ್ದರು. ಕೆಲ ಗಂಟೆಗಳ ಕಾಲ ಸ್ಥಳದಲ್ಲಿ ಆಂತಕದ ವಾತಾವರಣ ನಿರ್ಮಾಣವಾಗಿತ್ತು.

ಲಾಲ್ ಬಜಾರ್ ಕಂಟ್ರೋಲ್ ರೂಮಿಗೆ 1.15ರ ಸುಮಾರಿಗೆ ಕರೆ ಬಂದಿತ್ತು. ಅರ್ಶದ್ ಎಂಬ ವ್ಯಕ್ತಿಯೊಬ್ಬ ಮಾನವ ಬಾಂಬರ್ ಆಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ. ಕೂಡಲೇ ತಪಾಸಣೆ ನಡೆಸಲು ಆರಂಭಿಸಲಾಯಿತು. ಆದರೆ, ತಪಾಸಣೆ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಸಿಗಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲ ನಿಮಿಷಗಳ ನಂತರ ಮತ್ತೊಂದು ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ವಿಮಾನ ನಿಲ್ದಾಣದ ಒಳಗೆ ಬಾಂಬ್ ಇರಿಸಲಾಗಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಿದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ತಪಾಸಣೆ ನಡೆಸಲಾಗಿತ್ತು. ನಂತರ ಇದೊಂದು ಹುಸಿ ಬಾಂಬ್ ಕರೆಯೆಂದು ತಿಳಿದು ಬಂದಿತು. ಕರೆ ಮಾಡಿದ ವ್ಯಕ್ತಿಯನ್ನು ಹುಡುಕಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com