26/11 ಉಗ್ರ ದಾಳಿ ಪ್ರಕರಣ; ಪಾಕ್ ನಿಂದ ಹೊಣೆಗಾರಿಕೆ, ನ್ಯಾಯವನ್ನು ನಿರೀಕ್ಷಿಸುತ್ತಿದ್ದೇವೆ: ಅಮೆರಿಕ

26/11 ಮುಂಬೈ ದಾಳಿ ಪ್ರಕರಣದ ವಿಚಾರಣೆ ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಅಮೆರಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ನ್ಯಾಯ, ಹೊಣೆಗಾರಿಕೆಯನ್ನು ನೋಡಲು...
ದಾಳಿಗೆ ತುತ್ತಾಗಿದ್ದ ತಾಜ್ ಹೊಟೇಲ್
ದಾಳಿಗೆ ತುತ್ತಾಗಿದ್ದ ತಾಜ್ ಹೊಟೇಲ್

ವಾಷಿಂಗ್ ಟನ್: 26/11 ಮುಂಬೈ ದಾಳಿ ಪ್ರಕರಣದ ವಿಚಾರಣೆ ಬಗ್ಗೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಅಮೆರಿಕ, ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ನ್ಯಾಯ ಸಿಗುವುದನ್ನು ಹಾಗು ಹೊಣೆಗಾರಿಕೆಯನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಅಮೆರಿಕದ ವಕ್ತಾರ ಮಾರ್ಕ್ ಸಿ ಟೋನರ್, ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ- ಪಾಕಿಸ್ತಾನ ನಡುವಿನ ಗುಪ್ತಚರ ಮಾಹಿತಿ ಹಂಚಿಕೆ ಸೇರಿದಂತೆ ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕ ಹಿಂದಿನಿಂದಲೂ ಉತ್ತೇಜನ ನೀಡುತ್ತಿದೆ.

ಮುಂಬೈ ದಾಳಿಯಲ್ಲಿ ಅಮೆರಿಕ ಪ್ರಜೆಗಳೂ ಸಹ ಪ್ರಾಣ ಕಳೆದುಕೊಂಡಿದ್ದು,  ಪ್ರಕರಣದಲ್ಲಿ ಹೊಣೆಗಾರಿಕೆ ಹಾಗೂ ನ್ಯಾಯ ಸಿಗುವುದನ್ನು ನೋಡಲು ಬಯಸುತ್ತಿದ್ದೇವೆ ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ ಎಂದು ಮಾರ್ಕ್ ಟೋನರ್ ತಿಳಿಸಿದ್ದಾರೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿರುವ ಬಗ್ಗೆ ಅಮೆರಿಕ ಸಹ ಈಗಾಗಲೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ ಎಂದು ಟೋನರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com