ಶತಾಬ್ದಿ, ರಾಜಧಾನಿ, ಡುರಾಂಟೊ ಪ್ರಯಾಣ ಇನ್ನು ದುಬಾರಿ; ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರ ಏರಿಕೆ!

ಶತಾಬ್ದಿ, ರಾಜಧಾನಿ, ಡ್ಯುರಂಟೋ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಇನ್ನು ಮುಂದೆ ಟಿಕೆಟ್ ದರ ಏರಿಕೆ ಸಾಮಾನ್ಯವಾಗಿರಲಿದ್ದು, ಬೇಡಿಕೆಗೆ ಅನುಗುಣವಾಗಿ ಈ ರೈಲುಗಳ ಟಿಕೆಟ್ ದರ ಏರಿಕೆ ಮಾಡಲು ಕೇಂದ್ರ ರೈಲ್ವೇ ನಿಲಾಖೆ ನಿರ್ಧರಿಸಿದೆ.
ರೈಲು ಪ್ರಯಾಣ ದುಬಾರಿ (ಸಂಗ್ರಹ ಚಿತ್ರ)
ರೈಲು ಪ್ರಯಾಣ ದುಬಾರಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಶತಾಬ್ದಿ, ರಾಜಧಾನಿ, ಡ್ಯುರಂಟೋ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಇನ್ನು ಮುಂದೆ ಟಿಕೆಟ್ ದರ ಏರಿಕೆ ಸಾಮಾನ್ಯವಾಗಿರಲಿದ್ದು, ಬೇಡಿಕೆಗೆ ಅನುಗುಣವಾಗಿ ಈ  ರೈಲುಗಳ ಟಿಕೆಟ್ ದರ ಏರಿಕೆ ಮಾಡಲು ಕೇಂದ್ರ ರೈಲ್ವೇ ನಿಲಾಖೆ ನಿರ್ಧರಿಸಿದೆ.

ರೈಲ್ವೇ ಇಲಾಖೆಯ ಈ ನೂತನ ವಿಧಾನದಿಂದಾಗಿ ಇನ್ನು ಮುಂದೆ ಶತಾಬ್ದಿ, ರಾಜಧಾನಿ, ಡುರಂಟೋ ರೈಲು ದುಬಾರಿಯಾಗಿರಲಿದ್ದು, ಬೇಡಿಕೆಗೆ ಅನುಗುಣವಾಗಿ ದರ ಹೆಚ್ಚು ಮಾಡುವ ವ್ಯವಸ್ಥೆ  ಶುಕ್ರವಾರದಿಂದ ಜಾರಿಗೆ ಬರಲಿದೆ. ಆದರೆ ಪ್ರಥಮ ದರ್ಜೆ ಹವಾನಿಯಂತ್ರಿತ ಮತ್ತು ಎಕ್ಸಿಕ್ಯೂಟಿವ್‌ ಶ್ರೇಣಿಗಳಿಗೆ ಈಗ ಇರುವ ದರವೇ ಅನ್ವಯವಾಗಲಿದೆ.

ಇಲಾಖೆಯ ನೂತನ ದರ ಏರಿಕೆಯ ಅನ್ವಯ ಶತಾಬ್ದಿ, ರಾಜಧಾನಿ, ಡುರಂಟೋ ರೈಲುಗಳ ಆರಂಭದ ಶೇ 10ರಷ್ಟು ಟಿಕೆಟ್‌ಗಳನ್ನು ಮೂಲ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಆದರೆ  ಬಳಿಕದ ಪ್ರತೀ ಶೇ .10 ರಷ್ಟು ಟಿಕೆಟ್‌ಗಳಿಗೆ ಶೇ.10ರಂತೆ ದರ ಏರಿಕೆಯಾಗಲಿದೆ. ಈ ದರ ಏರಿಕೆ ಪ್ರಮಾಣ ಗರಿಷ್ಠ ಶೇ. 50ರವರೆಗೂ ಮುಂದುವವರೆಯಲಿದೆ ಎಂದು ತಿಳಿದುಬಂದಿದೆ.

ಇನ್ನು 2 ಟೈರ್‌ ಎ.ಸಿ ಮತ್ತು ಚೇರ್‌ ಕಾರ್‌ಗಳಲ್ಲಿ ಗರಿಷ್ಠ ಶೇ.50ರಷ್ಟು ದರ ಏರಿಕೆಗೆ ಅವಕಾಶವಿದ್ದು, 3 ಟೈರ್‌ ಎ.ಸಿಯಲ್ಲಿ ಗರಿಷ್ಠ ಶೇ.40ರಷ್ಟು ದರ ಏರಿಕೆಯಾಗಲಿದೆ. ಅಂತೆಯೇ ಟಿಕೆಟ್  ಕಾಯ್ದಿರಿಸುವಿಕೆ ಶುಲ್ಕ, ಸೂಪರ್‌ಫಾಸ್ಟ್‌ ಶುಲ್ಕ, ಕೇಟರಿಂಗ್‌ ಶುಲ್ಕ, ಸೇವಾ ಶುಲ್ಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಲಾಖೆ ಹೇಳಿದೆ.  ಪ್ರಸ್ತುತ ದೇಶಾದ್ಯಂತ 42 ರಾಜಧಾನಿ, 46  ಶತಾಬ್ದಿ ಮತ್ತು 54 ಡ್ಯುರಂಟೋ ರೈಲುಗಳು ಸಂಚರಿಸುತ್ತಿವೆ.

ನೂತನ ಟಿಕೆಟ್ ದರ ಏರಿಕೆ ಪಟ್ಟಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com