ಅಪಹರಣಕ್ಕೊಳಗಾದ ಯುವಕ
ದೇಶ
ಉಲ್ಫಾ ಉಗ್ರರು ಅಪಹರಿಸಿದ್ದ ಬಿಜೆಪಿ ನಾಯಕನ ಪುತ್ರನ ಬಿಡುಗಡೆ
ಕಳೆದ ತಿಂಗಳು ಉಲ್ಫಾ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಅಸ್ಸಾಂ ಬಿಜೆಪಿ ನಾಯಕನ ಪುತ್ರನನ್ನು ಶುಕ್ರವಾರ ಬಿಡುಗಡೆ...
ನವದೆಹಲಿ: ಕಳೆದ ತಿಂಗಳು ಉಲ್ಫಾ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಅಸ್ಸಾಂ ಬಿಜೆಪಿ ನಾಯಕನ ಪುತ್ರನನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ಬಿಜೆಪಿ ನಾಯಕ ರತ್ನೇಶ್ವರ್ ಮರೊನ್ ಅವರ ಪುತ್ರ, 27 ವರ್ಷದ ಕುಲದೀಪ್ ಮರೊನ್ ನನ್ನು ಆಗಸ್ಟ್ 1ರಂದು ಅಸ್ಸಾಂ-ಅರುಣಾಚಲ ಪ್ರದೇಶದ ಗಡಿ ಪ್ರದೇಶದ ಒಂದು ಸಣ್ಣ ನಗರದಲ್ಲಿ ಉಲ್ಫಾ ಉಗ್ರರು ಅಪಹರಿಸಿದ್ದರು.
ಉಗ್ರರು ಇಂದು ಕುಲದೀಪ್ ನನ್ನು ಮಯನ್ಮಾರ್ - ಅರುಣಾಚಲ ಪ್ರದೇಶ ಗಡಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕನ ಪುತ್ರನ್ನು ಅಪಹರಿಸಿದ್ದ ಉಲ್ಫಾ ಉಗ್ರರು, ಐಎಸ್ಐಎಸ್ ಮಾದರಿಯಲ್ಲಿ ವಿಡಿಯೋ ಬಿಡುಗಡೆ ಮಾಡಿ ಒಂದು ಕೋಟಿ ರುಪಾಯಿಗೆ ಬೇಡಿಕೆಯಿಟ್ಟಿದ್ದರು. ಆದರೆ ಕುಲದೀಪ್ ನನ್ನು ಬಿಡುಗಡೆ ಮಾಡಿರುವ ಉಗ್ರರಿಗೆ ಹಣ ನೀಡಲಾಗಿದೆಯೋ ಅಥವಾ ಇಲ್ಲ ಎಂಬುದುರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ