ಸರ್ಕಾರಿ ಅಧಿಕಾರಿಯಿಂದ 5 ಲಕ್ಷ ಲಂಚಕ್ಕೆ ಬೇಡಿಕೆ, ಇದೇನಾ ಅಚ್ಛೇ ದಿನ್; ಮೋದಿಗೆ ಕಪಿಲ್ ಪ್ರಶ್ನೆ

ಕಪಿಲ್ ಶರ್ಮಾ-ನರೇಂದ್ರ ಮೋದಿ
ಕಪಿಲ್ ಶರ್ಮಾ-ನರೇಂದ್ರ ಮೋದಿ
ಮುಂಬೈ: ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು ಇದೇನಾ ಅಚ್ಛೇ ದಿನ್ ಎಂದು ಪ್ರಮುಖ ಹಾಸ್ಯ ನಟ, ಟಿವಿ ನಿರೂಪಕ ಕಪಿಲ್ ಶರ್ಮಾ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ. 
ತಮ್ಮ ಯಾವುದೋ ಕೆಲಸಕ್ಕಾಗಿ ಕಪಿಲ್ ಶರ್ಮಾ ಮುಂಬೈ ಮಹಾನಗರ ಪಾಲಿಕೆ ಕಚೇರಿಗೆ ಹೋಗಿದ್ದಾರೆ. ಅಲ್ಲಿಯ ಅಧಿಕಾರಿ ಆ ಕೆಲಸ ಮಾಡಿಕೊಡಲು 5 ಲಕ್ಷ ರು. ಲಂಚ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಕಪಿಲ್ ಶರ್ಮಾ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. 
ಕಳೆದ ಐದ ವರ್ಷಗಳಲ್ಲಿ ಸುಮಾರು 15 ಕೋಟಿ ರುಪಾಯಿ ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ಆದರೂ ನನ್ನ ಕಚೇರಿಯನ್ನು ಸುಗುಮವಾಗಿ ನಡೆಸಲು ಅಧಿಕಾರಿಗಳು 5 ಲಕ್ಷ ರುಪಾಯಿ ಲಂಚ ನೀಡಬೇಕಂತೆ. ಮೋದಿ ಅವರೇ, ಇದೇನಾ ನಿಮ್ಮ ಅಚ್ಛೇದಿನ್ ಅಂತಾ ಕಪಿಲ್ ಶರ್ಮಾ ಟ್ವೀಟ್ ಮಾಡಿದ್ದಾರೆ. 
ಕಪಿಲ್ ಶರ್ಮಾರ ಟ್ವೀಟ್ ಗೆ ಸಿಕ್ಕಾಪಟ್ಟೆ ರಿಟ್ವೀಟ್ ಗಳು ಆಗಿದ್ದವು, ಇದು ವ್ಯಾಪಕ ಚರ್ಚೆ ಆಗುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿ. ಕಪಿಲ್ ಶರ್ಮಾ ನಿಮ್ಮನ್ನು ಲಂಚ ಕೇಳಿದ ವ್ಯಕ್ತಿಯ ವಿವರಗಳನ್ನು ನನಗೆ ನೀಡಿ ನಾನು ವಿಚಾರಣೆಗೆ ಆದೇಶಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಟ್ವೀಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com