ಮತ್ತೊಂದು ಮಿಗ್ ಅಪಘಾತ; ರಾಜಸ್ತಾನದಲ್ಲಿ ಯುದ್ಧ ವಿಮಾನ ಪತನ; ಪೈಲಟ್ ಗಳು ಪಾರು
ಬಾರ್ಮರ್: ಭಾರತೀಯ ಸೇನೆಗೆ ಸೇರಿದ ಮಿಗ್ 21 ಯುದ್ಧ ವಿಮಾನವೊಂದು ರಾಜಸ್ತಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜಸ್ತಾನದ ಬಾರ್ಮರ್ ನಲ್ಲಿ ತಾಂತ್ರಿಕ ದೋಷದಿಂದ ಮಿಗ್ 21 ವಿಮಾನ ಪತನವಾಗಿದ್ದು, ಬಾರ್ಮರ್ ಸಮೀಪದ ಉತ್ತರ್ ಲಾಯ್ ಸೇನಾ ನೆಲೆ ಸಮೀಪದಲ್ಲೇ ವಿಮಾನ ಪತನವಾಗಿದೆ. ಪ್ರಾಥಮಿಕ ಮಾಹಿತಗಳ ಪ್ರಕಾರ ವಿಮಾನ ಪತನದಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸೇನಾ ವಕ್ತಾರರು, ಬಾರ್ಮರ್ ಸಮೀಪದ ಉತ್ತರ್ ಲಾಯ್ ವಾಯುಸೇನಾ ನೆಲೆಯಿಂದ ಇಂದು ಮಧ್ಯಾಹ್ನ ಟೇಕ್ ಆಫ್ ಆಗಿದ್ದ, ಟಿ-69 ತರಬೇತಿ ವಿಮಾನ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಪತನವಾಗಿ ಮಲಿಯೋಕಿ ಧನಿ ಸಮೀಪದ ಮೈದಾನದಲ್ಲಿ ಬಿದ್ದಿದೆ. ಇಬ್ಬರೂ ಪೈಲಟ್ ಗಳು ವಿಮಾನ ಪತನವಾಗುವ ಮುನ್ಸೂಚನೆ ತಿಳಿಯುತ್ತಿದ್ದಂತೆಯೇ ಪ್ಯಾರಾಚೂಟ್ ಮೂಲಕ ವಿಮಾನದಿಂದ ಜಿಗಿದಿದ್ದಾರೆ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ವಿಮಾನ ಅಪಘಾತ ಸಂಬಂಧ ವಾಯುಸೇನಾ ನೆಲೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ