ಶಿಯಾ ಮಹಿಳೆಯರೂ ತಲ್ಲಾಖ್ ನೀಡಬಹುದು: ಶಿಯಾ ಮುಸ್ಲಿಂ ಮಂಡಳಿ

ಮಹಿಳೆಯರಿಗೂ ಪುರುಷರಂತೆ ಸಮಾನ ಹಕ್ಕು ನೀಡಬೇಕು ಎಂದು ಶಿಯಾ ಮುಸ್ಲಿಂ ಮಂಡಳಿ ವಾದಿಸಿದೆ. ಅಲ್ಲದೆ ತಾನು ಶಿಯಾ ಮುಸ್ಲಿಂ ಮಹಿಳೆಯರಿಗೂ ತಲ್ಲಾಖ್ ನೀಡುವ ಹಕ್ಕು ನೀಡುವುದಾಗಿ ಘೋಷಣೆ ಮಾಡಿದೆ.
ಮುಸ್ಲಿಂ ಮಹಿಳೆಯರಿಂದ ತಲ್ಲಾಖ್ (ಸಾಂದರ್ಭಿಕ ಚಿತ್ರ)
ಮುಸ್ಲಿಂ ಮಹಿಳೆಯರಿಂದ ತಲ್ಲಾಖ್ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ತಲ್ಲಾಖ್ ನೀಡುವುದನ್ನು ಸಮರ್ಥಿಸಿಕೊಂಡಿರುವ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ನಿರ್ಧಾರವನ್ನು ಶಿಯಾ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ  ವಿರೋಧಿಸಿದ್ದು, ಮಹಿಳೆಯರಿಗೂ ಪುರುಷರಂತೆ ಸಮಾನ ಹಕ್ಕು ನೀಡಬೇಕು ಎಂದು ವಾದಿಸಿದೆ. ಅಲ್ಲದೆ ತಾನು ಶಿಯಾ ಮುಸ್ಲಿಂ ಮಹಿಳೆಯರಿಗೂ ತಲ್ಲಾಖ್ ನೀಡುವ ಹಕ್ಕು ನೀಡುವುದಾಗಿ  ಘೋಷಣೆ ಮಾಡಿದೆ.

ತನ್ನ ಹೇಳಿಕೆಯಲ್ಲಿ ಆಧುನಿಕ ವಿವಾಹ ಹಾಗೂ ವಿಚ್ಛೇದನ ಒಪ್ಪ೦ದ 'ಮಾಡ್ರರ್ನ್ ನಿಖಾಹ್ ನಾಮಾ'ವನ್ನು ಶಿಯಾ ಮ೦ಡಳಿ ಪ್ರಸ್ತಾಪಿಸಿದ್ದು, ಇದರಲ್ಲಿ ಮಹಿಳೆಯರಿಗೂ ಪುರುಷರ ರೀತಿ ಸಮಾನ  ಹಕ್ಕುಗಳನ್ನು ನೀಡಲಾಗಿದೆ. "ಕೇವಲ ಪುರುಷರು ಮೂರು ಬಾರಿ ತಲಾಖ್ ಎ೦ದ ಮಾತ್ರಕ್ಕೆ ವಿಚ್ಛೇದನ ಅಂಗೀಕಾರಗೊಳ್ಳಬಾರದು. ಪತಿ ಪತ್ನಿಯರಿಬ್ಬರ ಸಮ್ಮತಿಯ ಮೇರೆಗೆ ವಿಚ್ಚೇದನ  ನಡೆಯಬೇಕು. ಸಾಕ್ಷಿಗಳ ಸಮ್ಮುಖವೇ ವಿಚ್ಚೆದನ ನಡೆಯಬೇಕು ಮತ್ತು ಪತ್ನಿಗೆ ಇತರ ಆದಾಯದ ಮೂಲವಿಲ್ಲದಿದ್ದರೆ ಪತಿಯೇ ಪರಿಹಾರ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಪತಿ 2 ವಷ೯ಗಳಿಗೂ ಹೆಚ್ಚು ಕಾಲ ನಾಪತ್ತೆಯಾಗಿದ್ದರೆ ಅಥವಾ ಆಕೆಯ ಅಗತ್ಯಗಳನ್ನು ಪೂರೈಸದಿದ್ದರೆ ವಿಚ್ಚೇದನ ಪಡೆಯಲು ಪತ್ನಿಗೆ ಅವಕಾಶ ನೀಡಬೇಕು ಮತ್ತು ಪತಿಯಿ೦ದ ದೈಹಿಕ  ಹಲ್ಲೆಗೆ ಒಳಗಾಗಿದ್ದರೆ ಅಥವಾ ಜೀವಕ್ಕೆ ಅಪಾಯವಿದ್ದರೆ ವಿಚ್ಚೇದನ ಪಡೆಯಲು ಪತ್ನಿಗೆ ಅವಕಾಶವಿರಬೇಕು ಎ೦ದೂ 'ಮಾಡ್ರರ್ನ್ ನಿಖಾಹ್ ನಾಮಾ'ದಲ್ಲಿ ನಮೂದಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಯಾ ಮುಸ್ಲಿಂ ಮುಖಂಡ ಮೌಲಾನಾ ಯಾಸೂಬ್ ಅಬ್ಬಾಸ್ ಅವರು, "ಇದೇ ರೀತಿಯ ವಿಚ್ಛೇದನ ಪದ್ಧತಿ ಉತ್ತರಪ್ರದೇಶದ ಸುನ್ನಿ ಮುಸ್ಲಿಮರಲ್ಲಿ ಹಾಗೂ ಇತರ  ಪ್ರದೇಶಗಳಲ್ಲಿ ಮುಸ್ಲಿ೦ ಸಮುದಾಯಗಳಲ್ಲಿ ಜಾರಿಯಲ್ಲಿದೆ. ದೇಶದಲ್ಲಿ 2004-05 ರ ಅ೦ದಾಜು ಅ೦ಕಿಅಂಶಗಳ ಪ್ರಕಾರ ಒಟ್ಟು 15.7 ಕೋಟಿ ಮುಸ್ಲಿಂ ಜನಸ೦ಖ್ಯೆಯ ಪ್ಯೆಕಿ ಕೇವಲ 4-5 ಲಕ್ಷ  ಶಿಯಾ ಮುಸ್ಲಿಮರಿದ್ದಾರೆ. ಹೀಗಾಗಿ ಮುಸ್ಲಿಮರಲ್ಲಿ ಶಿಯಾ ಸಮುದಾಯ ಅಲ್ಪಸ೦ಖ್ಯಾತರಾಗಿದ್ದಾರೆ. ಮು೦ದಿನ ವಾರ ನಡೆಯಲಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮ೦ಡಳಿ ಸಭೆಯಲ್ಲಿ ಈ  "ಮಾಡ್ರರ್ನ್ ನಿಖಾಹ್ ನಾಮಾ" ನೀತಿಗಳನ್ನು ಪ್ರಸ್ತಾಪಿಸುವುದಾಗಿ ಮೌಲಾನಾ ಅಬ್ಬಾಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com