

ಶ್ರೀನಗರ: ಪವಿತ್ರ ಹಬ್ಬ ಈದ್ ಮಿಲಾದ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಕಾಶ್ಮೀರದಲ್ಲಿ ಬಂದ್ ಆಚರಣೆ 66ನೇ ದಿನಕ್ಕೆ ಕಾಲಿಟ್ಟಿದೆ.
ಶ್ರೀನಗರ ಮತ್ತು ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲಾಗುತ್ತಿದ್ದು, ಈಗಾಗಲೇ ಅನಂತ್ನಾಗ್, ಕುಲ್ಗಾಮ್, ಶೋಪಿಯಾನ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.
ಈದ್ ಮಿಲಾದ್ ಹಬ್ಬದ ನಡುವೆಯೂ ಕಾಶ್ಮೀರದಲ್ಲಿ ಬಂದ್ ಆಚರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂದ್ ಪರಿಣಾಮ ಕಾಶ್ಮೀರದಲ್ಲಿ ಅಂಗಡಿ ಮುಗ್ಗಟ್ಟುಗಳು, ಬೇಕರಿಗಳು, ಮಾಂಸದ ಅಂಗಡಿ, ಶೈಕ್ಷಣಿಕ ಕ್ಷೇತ್ರಗಳು, ಮಾರುಕಟ್ಟೆ, ಸಾರ್ವಜನಿಕ ಸಾರಿಗೆ ಹಾಗೂ ಇನ್ನಿತರೆ ವ್ಯಾವಹಾರಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಈ ಬಾರಿಯ ಈದ್ ಸಂಭ್ರಮಕ್ಕೆ ಮಂಕು ಕವಿಯುವ ಸಾಧ್ಯತೆಗಳು ಹೆಚ್ಚಾದಂತಿದೆ.
Advertisement