ಕಾಶ್ಮೀರ: ಬಕ್ರೀದ್ ಪ್ರಾರ್ಥನೆ ಬಳಿಕ ಹಿಂಸಾಚಾರ, 2 ಸಾವು

ಕಾಶ್ಮೀರ ಕಣಿವೆಯಲ್ಲಿ ಈದ್ ಪ್ರಾರ್ಥನೆ ಬಳಿಕ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದರಿಂದ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ...
ಕಾಶ್ಮೀರ ಪರಿಸ್ಥಿತಿ ಚಿತ್ರ
ಕಾಶ್ಮೀರ ಪರಿಸ್ಥಿತಿ ಚಿತ್ರ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಈದ್ ಪ್ರಾರ್ಥನೆ ಬಳಿಕ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದರಿಂದ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ ಮೂವರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

ಇಂಡಿಯನ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

ಹೆಚ್ಚಿನ ಹಿಂಸಾಚಾರವನ್ನು ತಪ್ಪಿಸಲು ಶ್ರೀನಗರ ಸೇರಿದಂತೆ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಈದ್ ಸಂಬಂಧ ಸಾರ್ವಜನಿಕ ಸಭೆಗೆ ಆಯಾ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಶ್ರೀನಗರದ ಪ್ರಖ್ಯಾತ ಹಸ್ರತ್ ಬಾಲ್ ಸಮಾಧಿ ಬಳಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಿಲ್ಲ. ಜನರು ಸ್ಥಳೀಯ ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿತ್ತು.

ಸಾಮಾನ್ಯವಾಗಿ ಬಕ್ರೀದ್ ದಿನ ಜನರಿಂದ ಗಿಜಿಗಿಡುತ್ತಿದ್ದ ಶ್ರೀನಗರದ ಮಾರುಕಟ್ಟೆಯಲ್ಲಿ ಇಂದು ಜನರಿಲ್ಲದೆ ನಿರ್ಜನತೆ ಕಾಡುತ್ತಿದೆ. ಬೇಕರಿ ಮತ್ತು ತಿಂಡಿ ತಿನಿಸುಗಳ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಕುರಿ ಮತ್ತು ಮೇಕೆಯ ಮಾರಾಟಕ್ಕೆ ಕಾಯುತ್ತಿದ್ದ ಮಾರಾಟಗಾರರಿಗೆ ಈ ವರ್ಷ ವ್ಯಾಪಾರ ಅಷ್ಟೊಂದು ಉತ್ತಮವಾಗಿ ಆಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com