- Tag results for protesters
![]() | ಶ್ರೀಲಂಕಾ ಬಿಕ್ಕಟ್ಟು: ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರಿಗೆ ಕೋಟ್ಯಂತರ ರೂ. ನಗದು ಪತ್ತೆ!ಶ್ರೀಲಂಕಾದಲ್ಲಿ ಪಲಾಯನ ಮಾಡಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಧಿಕೃತ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ನಗದು ಹಣ ಸಿಕ್ಕಿರುವುದಾಗಿ ಸರ್ಕಾರ ವಿರೋಧಿ ಪ್ರತಿಭಟನಾಕಾರರು ತಿಳಿಸಿದ್ದಾರೆ. |
![]() | ಕಾಶ್ಮೀರಿ ಪಂಡಿತರ ಮೇಲೆ ಅಶ್ರುವಾಯು ಪ್ರಯೋಗ: ತನಿಖೆಗೆ ಆದೇಶಿದ ಲೆಫ್ಟಿನೆಂಟ್ ಗವರ್ನರ್ಕಾಶ್ಮೀರಿ ಪಂಡಿತ ರಾಹುಲ್ ಭಟ್ ಹತ್ಯೆಯನ್ನು ವಿರೋಧಿಸಿ ಮೇ 13ರಂದು ನಡೆಸಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾನಿರತ ಕಾಶ್ಮೀರಿ ಪಂಡಿತರ ಮೇಲೆ ಅಶ್ರುವಾಯು ಶೆಲ್ ದಾಳಿ ನಡೆದಿದ್ದು ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತನಿಖೆಗೆ ಆದೇಶಿಸಿದ್ದಾರೆ. |
![]() | ಲಂಕಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರಧಾನಿ ವಿಕ್ರಮ ಸಿಂಘೆ ಬೆಂಬಲ!ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಲಂಕಾದಲ್ಲಿ ವಿಲಕ್ಷಣ ಬೆಳವಣಿಗೆಯಲ್ಲಿ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಷ್ಟ್ರಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. |
![]() | ಲಂಕೆಗೆ ಬೆಂಕಿ: 'ಸೇಡಿನ ಕೃತ್ಯಗಳನ್ನು' ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದ ಶ್ರೀಲಂಕಾ ಅಧ್ಯಕ್ಷ, 8 ಸಾವು!ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕೆಯಲ್ಲಿ ಹಿಂಸಾಚಾರ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದ್ದು ಸತ್ತವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ಹಿಂಸಾಚಾರ ಮತ್ತು ಸೇಡಿನ ಕೃತ್ಯಗಳನ್ನು ನಿಲ್ಲಿಸುವಂತೆ ಜನರನ್ನು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಒತ್ತಾಯಿಸಿದ್ದಾರೆ. |
![]() | ರಾಜಪಕ್ಸೆ ಆಪ್ತರು ಲಂಕೆ ತೊರೆಯದಂತೆ ತಡೆಯಲು ಏರ್ ಪೋರ್ಟ್ ರಸ್ತೆಯಲ್ಲಿ ಪ್ರತಿಭಟನಾಕಾರರಿಂದ ಚೆಕ್ಪೋಸ್ಟ್ ನಿರ್ಮಾಣಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹಿಂಸಾಚಾರ ಮತ್ತು ವ್ಯಾಪಕ ಪ್ರತಿಭಟನೆ ಮುಂದುವರೆದಿದ್ದು ರಾಜಪಕ್ಸೆ ಕುಟುಂಬದ ನಿಷ್ಠಾವಂತರು ದೇಶದಿಂದ ಪಲಾಯನವಾಗದಂತೆ ತಡೆಯಲು ಕೊಲಂಬೋದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ... |
![]() | ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಉಲ್ಲಂಘಿಸಿದ 600ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನಕರ್ಫ್ಯೂ ನಿಯಮ ಉಲ್ಲಂಘಿಸಿದ 600ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಶ್ರೀಲಂಕಾದಲ್ಲಿ ಭಾನುವಾರ ಬಂಧಿಸಲಾಗಿದೆ. ನಿನ್ನೆ ಶನಿವಾರ ಸಾಯಂಕಾಲ 6 ಗಂಟೆಯಿಂದ ನಾಳೆ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಶ್ರೀಲಂಕಾದ(Sri Lanka) ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಹೇರಲಾಗಿದೆ. |
![]() | ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾದಲ್ಲೂ ವಿರೋಧ: ಸುಮಾರು 3 ಸಾವಿರ ಪ್ರತಿಭಟನಾಕಾರರ ಬಂಧನಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಧೋರಣೆ ವಿರುದ್ಧ ರಷ್ಯಾದಲ್ಲಿಯೂ ಭಾರೀ ವಿರೋಧ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಿಂದ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು 3 ಸಾವಿರ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. |
![]() | ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ: ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು, 18 ಮಂದಿ ಬಂಧನಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಸಂಬಂಧ 18 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. |
![]() | ಯೋಗಿ ಹಾದಿಯಲ್ಲಿ ಮಧ್ಯಪ್ರದೇಶ ಸರ್ಕಾರ; ಪ್ರತಿಭಟನಾಕಾರರಿಂದ ಹಾನಿಗೊಳಗಾದ ಆಸ್ತಿಯನ್ನು ಅವರಿಂದಲೇ ಮರಳಿ ಪಡೆಯಲು ಮಸೂದೆಮಧ್ಯಪ್ರದೇಶ ಸರ್ಕಾರ ಉತ್ತರ ಪ್ರದೇಶ ಮಾದರಿಯನ್ನು ಅನುಸರಿಸಲು ಮುಂದಾಗಿದ್ದು ಪ್ರತಿಭಟನಾ ನಿರತರಿಂದ ಹಾನಿಗೊಳಗಾದ ಆಸ್ತಿಯನ್ನು ಪ್ರತಿಭಟನಾ ನಿರತರಿಂದಲೇ ವಾಪಸ್ ಪಡೆಯುವುದಕ್ಕೆ ಅನುವುಮಾಡಿಕೊಡುವ ಮಸೂದೆಯನ್ನು ಮಂಡಿಸಿದೆ. |
![]() | ಸಾರ್ವಜನಿಕ ಆಸ್ತಿ ಹಾನಿಯನ್ನು ಪ್ರತಿಭಟನಾಕಾರರಿಂದಲೇ ಭರಿಸುವ ಕಾನೂನು ಜಾರಿಗೆ ಹರ್ಯಾಣ ಚಿಂತನೆಪ್ರತಿಭಟನೆ ವೇಳೆ ಉಂಟಾಗುವ ಸಾರ್ವಜನಿಕ ಆಸ್ತಿಗಳಿಗೆ ಹಾನಿಯನ್ನು ಪ್ರತಿಭಟನಾಕಾರರಿಂದಲೇ ಭರಿಸುವ ಕಾನೂನು ಜಾರಿಗೆ ಹರ್ಯಾಣ ಸರ್ಕಾರ ಚಿಂತನೆ ನಡೆಸಿದೆ. |
![]() | ಸಿಂಘು ಗಡಿಭಾಗದ ಪ್ರತಿಭಟನಾ ಸ್ಥಳದಲ್ಲಿ ಘರ್ಷಣೆ: ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಸೇರಿ 44 ಮಂದಿ ಬಂಧನದೆಹಲಿ ಮತ್ತು ಹರ್ಯಾಣ ಗಡಿಭಾಗದ ಸಿಂಘುವಿನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸೇರಿದಂತೆ 44 ಮಂದಿಯನ್ನು ಇದುವರೆಗೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. |