ಬೀಫ್ ತಿನ್ನುವುದು ಕ್ರಿಮಿನಲ್ ಅಪರಾಧವೇಕೆ? ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ದೆಹಲಿಯಲ್ಲಿ ಬೀಫ್ ಇಟ್ಟುಕೊಳ್ಳುವುದು ಮತ್ತು ತಿನ್ನುವುದು ಕ್ರಿಮಿನಲ್ ಅಪರಾಧ ಎನ್ನುವ ದೆಹಲಿ ಜಾನುವಾರು ಸಂರಕ್ಷಣಾ ಕಾಯ್ದೆಯ ಅಂಶಗಳನ್ನು ವಜಾಗೊಳಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿಯಲ್ಲಿ ಬೀಫ್ ಇಟ್ಟುಕೊಳ್ಳುವುದು ಮತ್ತು ತಿನ್ನುವುದು ಕ್ರಿಮಿನಲ್ ಅಪರಾಧ ಎನ್ನುವ ದೆಹಲಿ ಜಾನುವಾರು ಸಂರಕ್ಷಣಾ ಕಾಯ್ದೆಯ ಅಂಶಗಳನ್ನು ವಜಾಗೊಳಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿದ ದೆಹಲಿ ಹೈಕೋರ್ಟ್ ಬುಧವಾರ ಇದಕ್ಕೆ ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ. 
ಡಿಸೇಂಬರ್ 8 ರೊಳಗೆ ಉತ್ತರ ನೀಡಲು ಆಮ್ ಆದ್ಮಿ ಸರ್ಕಾರಕ್ಕೆ ಮುಖ್ಯ ನ್ಯಾಯಾಧೀಶೆ ಜಿ ರೋಹಿಣಿ ಮತ್ತು ನ್ಯಾಯಾಧೀಶೆ ಸಂಗೀತಾ ಧಿಂಗ್ರಾ ಸೆಹಗಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೂಚಿಸದೆ. ಈ ಅರ್ಜಿಯನ್ನು ಮೇ 4 ರಂದು ಸಲ್ಲಿಸಲಾಗಿತ್ತು. 
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಿತಿಗಾಗಿ ಕೆಲಸ ಮಾಡುವ ಎನ್ ಜಿ ಒ ಒಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಆಲಿಸಿತ್ತು. "ತಮ್ಮ ಆಯ್ಕೆಯ ಆಹಾರವನ್ನು ಸೇವಿಸುವುದು, ಮಾನವ ಮೂಲಭೂತ ಹಕ್ಕುಗಳಲ್ಲಿ ಒಂದು" ಎಂದು ಎನ್ ಜಿ ಒ ವಾದ ಮಾಡಿತ್ತು. 
ಒಂದು ಧಾರ್ಮಿಕ ಆಚರಣೆಯನ್ನು ಹೇರಿ ಅದನ್ನು ಕಾನೂನನ್ನಾಗಿ ಮಾರ್ಪಾಡು ಮಾಡದಂತೆ ರಾಜ್ಯಗಳಿಗೆ ಸಂವಿಧಾನ ನಿಷೇಧ ಹೇರುತ್ತದೆ ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿತ್ತು. 
"ಬೀಫ್ ಅನ್ನು ಹೊಂದುವುದು ಮತ್ತು ತಿನ್ನುವುದನ್ನು ನಿಷೇಧಿಸಿರುವ ದೆಹಲಿ ಕೃಷಿ ಜಾನುವಾರು ಸಂರಕ್ಷಣಾ ಕಾಯ್ದೆ ಅರ್ಜಿದಾರರ ಮತ್ತು ಇಂತಹುದೇ ಪರಿಸ್ಥಿಯನ್ನು ಎದುರಿಸುವ ಹಲವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ" ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com