
ನವದೆಹಲಿ: ಮನುಷ್ಯನಿಗೆ ಚಿಕನ್ ಗುನ್ಯಾ ಬಂದರೆ ಆತ ಸಾಯುವುದಿಲ್ಲ ಎಂದು ಗೂಗಲ್ ತಿಳಿಸಿದೆ ಎಂದು ಹೇಳುವ ಮೂಲಕ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕನ್ ಗುನ್ಯಾ ರೋಗ ಬಂದರೇ ದೆಹಲಿ ವಾಸಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಚಿಕನ್ ಗುನ್ಯಾ ಬಂದ ರೋಗಿಗಳು ವೆಚ್ಚ ಭರಿಸಲು ಸರ್ಕಾರ ಸಹಾಯ ಮಾಡುತ್ತದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾದರೇ, ರೋಗಿಗಳು ಹೆದರದೇ ವೈದ್ಯರ ಸಲಹೆಯನ್ನು ಪಾಲಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಚಿಕನ್ ಗುನ್ಯಾದಿಂದ ಪ್ರಪಂಚದಲ್ಲಿ ಯಾರು ಸಾವನ್ನಪ್ಪಿಲ್ಲ, ಆದರೆ ದೆಹಲಿಯಲ್ಲಿ ಮಾತ್ರವೇ ಏಕೆ ಜನ ಚಿಕನ್ ಗುನ್ಯಾದಿಂದ ಸಾಯುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೆಲವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದವು, ವಯಸ್ಸಾದವರು ಮಾತ್ರ ಸಾವನ್ನಪ್ಪಿದ್ದಾರೆ, ಚಿಕನ್ ಗುನ್ಯಾದಿಂದ ಅಲ್ಲ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
Advertisement