ಶೌಚಾಲಯ ಕಟ್ಟಿಸಲು ಸಾಕಿದ್ದ ಕುರಿಗಳನ್ನು ಮಾರಿದ 104ರ ಹರೆಯದ ಅಜ್ಜಿ

ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ನಿವಾಸಿ 104 ರ ಹರೆಯದ ಮುದುಕಿಯೊಬ್ಬರು ಶೌಚಾಲಯ ನಿರ್ಮಿಸಲು ತಾವು ಸಾಕಿದ್ದ ಕುರಿಗಳನ್ನು ಮಾರಾಟ ಮಾಡಿದ್ದಾರೆ...
ಶೌಚಾಲಯ
ಶೌಚಾಲಯ

ಧಮ್ತರಿ: ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ನಿವಾಸಿ 104 ರ ಹರೆಯದ ಮುದುಕಿಯೊಬ್ಬರು ಶೌಚಾಲಯ ನಿರ್ಮಿಸಲು ತಾವು ಸಾಕಿದ್ದ ಕುರಿಗಳನ್ನು ಮಾರಾಟ ಮಾಡಿದ್ದಾರೆ.

ಈ ಅಜ್ಜಿ ನೆಲೆಸಿರುವ ಗ್ರಾಮ ಒಂದು ಕುಗ್ರಾಮವಾಗಿದ್ದು ಟಿವಿ ಮತ್ತು ಓದಲು ಪತ್ರಿಕೆಗಳು ಸಿಗದಂತ ಈ ಊರಿನಲ್ಲಿ ಶೇಖಡ 75ರಷ್ಟು ಗ್ರಾಮಸ್ಥರು ಬಯಲು ಶೌಚಾಲಯವನ್ನೇ ಅವಲಂಭಿಸಿದ್ದಾರೆ. ಇಂತಹ ಊರಿನಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಆದರ್ಶ ಮೆರೆದಿದ್ದಾರೆ.

ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿರುವ ಸುದ್ದಿ ತಿಳಿದ ಮುದುಕಿ ತನ್ನ ಕುರಿಗಳನ್ನು ಮಾರಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಅಜ್ಜಿಯ ಇಂತಹ ಸಾಧನೆ ಕಂಡ ಹಲವು ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಬಯಲು ಮುಕ್ತ ಶೌಚಾಲಯ ಮೂಲಕ ಸ್ವಚ್ಛ ಭಾರತ ಕನಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಈ ಪ್ರಕರಣಗಳು ಪ್ರೇರಕವಾಗಬಲ್ಲದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com