
ಪಣಜಿ: ನಾನೊಬ್ಬ ಆರ್ ಎಸ್ ಎಸ್ ನ ಶಿಸ್ತು ಬದ್ಧ ಸ್ವಯಂ ಸೇವಕ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಮಯವನ್ನು ಪಾಲಿಸುತ್ತೇನೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಗೋವಾದಲ್ಲಿ ಬಂಡಾಯ ಆರ್ ಎಸ್ ಎಸ್ ನಾಯಕ ಸುಭಾಷ್ ವೆಲಿಂಗ್ಕರ್ ಅವರನ್ನು ಉಚ್ಛಾಟಿಸಿದ ನಂತರ, ವೆಲ್ಲಿಂಗ್ ಕರ್ ಗೋವಾದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಪ್ರಜಾಪ್ರಭುತ್ವ, ಇಲ್ಲಿ ಯಾರೂ ಬೇಕಾದರೂ ಯಾವ ಪಕ್ಷವನ್ನಾದರೂ ಸ್ಥಾಪಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ನನಗೆ ಶಿಸ್ತು ಎಂಬುದು ಬಹಳ ಮುಖ್ಯ, ನಾನು ಶಿಸ್ತನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದೇನೆ, ಮುಂದೆಯೂ ಪಾಲಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಗೋವಾದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಭಾಷ್ ವೆಲ್ಲಿಂಗ್ಕರ್ ಆರ್ ಎಸ್ ಎಸ್ ಗೆ ಪರ್ಯಾಯವಾಗಿ ಮತ್ತೊಂದು ಪಕ್ಷ ಕಟ್ಟುತ್ತಾರೆಂಬ ವರದಿಗೆ ಪ್ರತಿಕ್ರಿಯಿಸಿದರು.
ಗೋವಾದ ಬಿಜೆಪಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಸುಭಾಷ್ ವೆಲಿಂಗ್ಕರ್ ನಡೆಯಿಂದ ಅಸಮಾಧಾನಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್), ಸಂಘಟನೆಯ ಗೋವಾ ಅಧ್ಯಕ್ಷ ಅವರನ್ನು ವಜಾಗೊಳಿಸಿತ್ತು.
Advertisement