ಪೆಲೆಟ್ ಗನ್'ಗೆ 15 ವರ್ಷದ ಬಾಲಕ ಸಾವು: ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ

ಶ್ರೀನಗರದ ಹರ್ವಾನ್ ನಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಭದ್ರತಾ ಪಡೆಗಳು ನಡೆಸಿದ ಪೆಲೆಟ್ ಗನ್ ದಾಳಿಗೆ 15 ವರ್ಷದ ಬಾಲಕನೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಶ್ರೀನಗರದ ಹರ್ವಾನ್ ನಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಭದ್ರತಾ ಪಡೆಗಳು ನಡೆಸಿದ ಪೆಲೆಟ್ ಗನ್ ದಾಳಿಗೆ 15 ವರ್ಷದ ಬಾಲಕನೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಮತ್ತೆ ಕಾಶ್ಮೀರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ಹರ್ವಾನ್ ಪ್ರದೇಶದಲ್ಲಿ ಗುಂಪೊಂದು ಪ್ರತಿಭಟನೆ ನಡೆಸಲು ಆರಂಭಿಸಿತ್ತು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಪೆಲೆಟ್ ಗನ್ ಗಳನ್ನು ಬಳಸಲು ಆರಂಭಿಸಿದ್ದರು. ಇದರಂತೆ ಗುಂಡು ತಗುಲಿ 15 ವರ್ಷದ ಮೊಮಿನ್ ಅಲ್ತಾಫ್ ಎಂಬ ಬಾಲಕ ನಿನ್ನೆ ಸಂಜೆ ಮೃತಪಟ್ಟಿದ್ದ.

ಜನರಿದ್ದ ಸ್ಥಳದಿಂದ ಬಹಳ ದೂರದಿಂದ ಪೊಲೀಸರೂ ಗುಂಡು ಹಾರಿಸಿದ್ದರು, ಬಾಲಕ ಮೃತಪಡಲು ಸಾಧ್ಯವಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕನ ಸಾವಿಗೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಬಾಲಕನ ಅಂತಿಮ ಸಂಸ್ಕಾರದ ವೇಳೆ ಜನರು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಅಲ್ಲದೆ, ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟವನ್ನು ನಡೆಸಿದ್ದಾರೆ. ಇದರಂತೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಪ್ರಯೋಗಿಸಿದರು ಎಂದು ಪೊಲೀಸ್ ವಕ್ತಾರ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಮತ್ತೆ ಹರ್ವಾನ್ ಸೇರಿದಂತೆ ಶ್ರೀನಗರದ ಹಲವೆಡೆ ಕರ್ಫ್ಯೂ ಮಾದರಿಯ ನಿರ್ಬಂಧವನ್ನು ಹೇರಲಾಗಿದೆ. ಭದ್ರತಾ ಪಡೆಗಳು ನಿರ್ಬಂಧ ಹೇರಿದ್ದರು, ಕೆಲ ಜನರು ಬಾಲಕನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com