
ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಅಲ್ಕಾ ಶಿರೋಹಿ ಅವರು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಯುಪಿಎಸ್ಸಿ ಅಧ್ಯಕ್ಷರಾಗಿರುವ ದೀಪಕ್ ಗುಪ್ತಾ ಅವರು ಮಂಗಳವಾರ ನಿವೃತ್ತರಾಗಲಿದ್ದು, ಆ ಹುದ್ದಗೆ ಅಲ್ಕಾ ಶಿರೋಹಿ ಅವರನ್ನು ರಾಷ್ಟ್ಪಪತಿ ಪ್ರಣಬ್ ಮುಖರ್ಜಿ ನೇಮಕ ಮಾಡಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಆದೇಶವೊಂದರಲ್ಲಿ ತಿಳಿಸಲಾಗಿದೆ.
ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಅಲ್ಕಾ ಶಿರೋಹಿ ಅವರು ಮುಂದಿನ ವಾರ ಅಧ್ಯಕ್ಷ ಹುದ್ದೆಗೆ ಏರಲಿದ್ದಾರೆ.
Advertisement