ಮುಂಬೈ: ಮುಂಬೈ ಕರಾವಳಿಯಲ್ಲಿ 17 ಮೀನುಗಾರರಿದ್ದ ದೋಣಿಯೊಂದು ಪ್ರತಿಕೂಲ ವಾತಾವರಣದಿಂದಾಗಿ ಸಮುದ್ರದಲ್ಲಿ ಮುಳುಗಿದ್ದು ಈ ಪೈಕಿ 14 ಮೀನುಗಾರರನ್ನು ರಕ್ಷಿಸಲಾಗಿದೆ. .ಮುಂಬೈನಿಂದ ಸುಮಾರು 30 ನಾಟಿಕಲ್ ಮೈಲ್ ದೂರದಲ್ಲಿ ದೋಣಿ ಮುಳುಗುತ್ತಿದ್ದುದ್ದನ್ನು ಗಮನಿಸಿ ಎಂವಿ ಡಿಪೆಂಡಬಲ್ ವ್ಯಾಪಾರಿ ಹಡಗಿನವರು 14 ಮಂದಿಯನ್ನು ರಕ್ಷಿಸಿ ಕರೆತಂದಿದ್ದಾರೆ. .ಇನ್ನು ನಾಪತ್ತೆಯಾಗಿರುವ ಇಬ್ಬರು ದೋಣಿ ಚಾಲಕರು ಹಾಗೂ ಮೂವರು ಮೀನುಗಾರರಿಗಾಗಿ ಕರಾವಳಿ ರಕ್ಷಣಾ ಪಡೆ ಹಾಗೂ ಭಾರತೀಯ ನೌಕಾಪಡೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos