ಉರಿ ಉಗ್ರ ದಾಳಿ, ರಾಜಕೀಯ ನಾಯಕತ್ವದ ವೈಫಲ್ಯದ ಫಲಿತಾಂಶ: ಕಾಂಗ್ರೆಸ್

ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್ ರಾಜಕೀಯ ನಾಯಕತ್ವದ ವೈಫಲ್ಯದ ಫಲಿತಾಂಶ ಎಂದು ಅಭಿಪ್ರಾಯಾಪಟ್ಟಿದೆ.
ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲಾ
ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲಾ
Updated on: 

ನವದೆಹಲಿ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್ ರಾಜಕೀಯ ನಾಯಕತ್ವದ ವೈಫಲ್ಯದ ಫಲಿತಾಂಶ ಎಂದು ಅಭಿಪ್ರಾಯಾಪಟ್ಟಿದೆ.

ಪಾಕಿಸ್ತಾನ ಬಗೆಗಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿ ಗೊಂದಲದಿಂದ ಕೂಡಿದ್ದು, ಸೈನಿಕರು ಹುತಾತ್ಮರಾಗಿರುವುದು ರಾಜಕೀಯ ನಾಯಕತ್ವದ ವೈಫಲ್ಯದಿಂದ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ವೇಳೆ ಪಾಕಿಸ್ತಾನದ ಬಗ್ಗೆ  ನರೇಂದ್ರ ಮೋದಿ ಸರ್ಕಾರದ ನೀತಿಯನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಭಾರತವೆಗೆ ನಿರಂತರ ದಾಳಿಗೆ ಗುರಿಯಾಗುತ್ತಿದೆ ಎಂದು ಕೇಳಿದೆ.  
" ಪಠಾಣ್ ಕೋಟ್ ನಲ್ಲಿ ಉಗ್ರ ದಾಳಿ ನಡೆದಾದ ತನಿಖೆ ನಡೀಸಲು ಐಎಸ್ಐ ಗೆ ಅನುಮತಿ ನೀಡಲಾಗಿತ್ತು, ಇದು ಪ್ರಧಾನಿ ಮೋದಿ ಸರ್ಕಾರ ಪಾಕಿಸ್ತಾನದ ವಿಷಯದಲ್ಲಿ ಕೈಗೊಂಡ ತಪ್ಪು ನಡೆ" ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.  

ಭಾರತದ ಗಡಿ ಭಾಗಗಳು ಹಾಗೂ ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಸಿಲುಕಿವೆ, ಇದಕ್ಕೆ ರಕ್ಷಣಾ ಸಚಿವರು ಹೊಣೆಗಾರರಾಗಬೇಕಾಗುತ್ತದೆ ಎಂದು ಸುರ್ಜೆವಾಲಾ ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದ ಬಗೆಗಿನ ಭಾರತ ಸರ್ಕಾರದ ನೀತಿಯನ್ನು ನರೇಂದ್ರ ಮೋದಿ ಆವರನ್ನು ಕಠಿಣ ನಾಯಕ ಎಂದು ಬಿಂಬಿಸುವುದಕ್ಕೆ ಬಳಸಿಕೊಳ್ಳಲಾಯಿತು. ಆದರೆ ಉರಿ ಸೆಕ್ಟರ್ ನಲ್ಲಿರುವ ಸೇನಾ ಕಚೇರಿಯ ಮೇಲಿನ ದಾಳಿ ಅದನ್ನು ಸುಳ್ಳುಗೊಳಿಸಿದೆ ಎಂದು ಸುರ್ಜೆವಾಲಾ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com