ಉರಿ ಉಗ್ರ ದಾಳಿ: ಪದ್ಯದ ಮೂಲಕ ಪಾಕ್ ತಿರುಗೇಟು ನೀಡಿದ ಭಾರತೀಯ ಯೋಧ

ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಪದ್ಯದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಯೋಧನ ವಿಡಿಯೋವೊಂದು ಇದೀಗ...
ಉರಿ ಉಗ್ರ ದಾಳಿ: ಪದ್ಯದ ಮೂಲಕ ಪಾಕ್ ತಿರುಗೇಟು ನೀಡಿದ ಭಾರತೀಯ ಯೋಧ
ಉರಿ ಉಗ್ರ ದಾಳಿ: ಪದ್ಯದ ಮೂಲಕ ಪಾಕ್ ತಿರುಗೇಟು ನೀಡಿದ ಭಾರತೀಯ ಯೋಧ
Updated on

ನವದೆಹಲಿ: ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಪದ್ಯದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಯೋಧನ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಯೋಧರ ತಂಡವೊಂದು ಸೇನಾ ವಾಹನದಲ್ಲಿ ಹೋಗುತ್ತಿದ್ದು, ವಾಹನ ಚಲಿಸುತ್ತಿದ್ದ ವೇಳೆಯಲ್ಲಿ ಯೋಧನೊಬ್ಬ ಪದ್ಯದ ಮೂಲಕ ಪಾಕಿಸ್ತಾನಕ್ಕೆ ಸವಾಲೆಸೆದಿದ್ದಾನೆ.

ನಾವು ಎಂದಿಗೂ ಹುಲಿಗಳು. ಹುಲಿಗಳು ಎಂದಿಗೂ ಯಾವುದಕ್ಕೂ ಹೆದರುವುದಿಲ್ಲ. ಹೋಗಿ ಆ ನರಿಗಳಿಗೆ ಹೇಳಿ, ಪಾಕಿಸ್ತಾನಕ್ಕೆ ಹೇಳಿ...ನಾವು ಬಾಂಬ್ ಗಳಿಗೆ, ಸ್ಫೋಟಕಗಳಿಗೆ ಹೆದರುವುದಿಲ್ಲ ಎಂದು... ಪಾಕಿಸ್ತಾನ ಸರಿಯಾಗಿ ಕಿವಿ ಕೊಟ್ಟು ಕೇಳು...ನಮ್ಮೊಂದಿಗೆ ಹೋರಾಟಕ್ಕಿಳಿಯುವ ಧೈರ್ಯ ಮಾಡಬೇಡ...ಮಾಡಿದರೆ, ಹೇಳಹೆಸರು ಇಲ್ಲದಂತಾಗಿ ಹೋಗುತ್ತೀಯಾ...ಕಾಶ್ಮೀರ ಇರುತ್ತೆ. ಆದರೆ, ಪಾಕಿಸ್ತಾನ ಇರುವುದಿಲ್ಲ...ಜೈ ಹಿಂದ್...ಭಾರತ್ ಮಾತಾಕಿ ಜೈ...ಎಂದು ಹೇಳಿಕೊಂಡಿದ್ದಾನೆ.

ಈ ಕವಿತೆಯನ್ನು ಯೋಧನೇ ರಚನೆ ಮಾಡಿದ್ದು, ತಾನೇ ಬರೆದ ಕವಿತೆಯನ್ನು ತಾನೇ ಹಾಡುವ ಮೂಲಕ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾನೆ. ಈ ಯೋಧ ಯಾರು...ಎಲ್ಲಿಯವರನು ಎಂಬ ಮಾಹಿತಿ ತಿಳಿದುಬಂದಿಲ್ಲ. ಆದರೆ, ಯೋಧನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಹಿಂದೂಸ್ತಾನ ಜನರ ಹೃದಯದಲ್ಲಿರುವ ಮಾತನ್ನು ಯೋಧ ತನ್ನ ಪದ್ಯದ ಮೂಲಕ ಹೇಳಿದ್ದಾನೆಂದು ಜನರು ಫೇಸ್ ಬುಕ್ ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com