ದೆಹಲಿಯಲ್ಲಿ ಕಳ್ಳಸಾಗಣೆ ಜಾಲ ಪತ್ತೆ: 2000 ಕೋಟಿ ಮೊತ್ತದ 7000 ಕೆಜಿ ಚಿನ್ನದ ಗಟ್ಟಿ ವಶ
ನವದೆಹಲಿ: ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಅತೀ ದೊಡ್ಡ ಚಿನ್ನದ ಕಳ್ಳಸಾಗಣೆಯನ್ನು ಪತ್ತೆ ಹಚ್ಚಲಾಗಿದ್ದು ಸರಿ ಸುಮಾರು 2 ಸಾವಿರ ಕೋಟಿ ಬೆಲೆ ಬಾಳುವ 7 ಸಾವಿರ ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ವಶಪಡಿಸಿಕೊಂಡಿದೆ.
7 ಸಾವಿರ ಕೆಜಿ ಚಿನ್ನವನ್ನು ಮ್ಯಾನ್ಮಾರ್ ನಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುವಾಗ ಡಿಆರ್‌ಐ ಖದೀಮರನ್ನು ಸೆರೆಹಿಡಿದ್ದು ಅವರಿಂದ ಇದರ ಮೊತ್ತ ಸುಮಾರು 2 ಸಾವಿರ ಕೋಟಿ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ ಕಳ್ಳಸಾಗಣೆಯಾಗಿದ್ದ 7 ಸಾವಿರ ಕೆಜಿ ಬಂಗಾರವನ್ನು ಡಿಆರ್‌ಐ ಜಪ್ತಿ ಮಾಡಿದೆ. ಈ ಸಂಬಂಧ ಗುವಾಹಟಿ ಮೂಲದ ವ್ಯಾಪಾರಿ ಹಾಗೂ ದೆಹಲಿ ಮೂಲದ ಆತನ ಸಹಚರನನ್ನು ಬಂಧಿಸಲಾಗಿದೆ. ಇವರಿಬ್ಬರೂ 617 ಸಲ ಚಿನ್ನವನ್ನು ಮ್ಯಾನ್ಮಾರ್ ನಿಂದ ಭಾರತಕ್ಕೆ ಕಳ್ಳ ಸಾಗಣೆ ಮಾಡಿರುವುದು ಪತ್ತೆಯಾಗಿದೆ.
ಸೆ.2ರಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ದೆಹಲಿ ಘಟಕದ ಅಧಿಕಾರಿಗಳು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಕೆಜಿ 24 ಕ್ಯಾರಟ್ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರ. ಇದರ ಮಾರುಕಟ್ಟೆ ಮೌಲ್ಯ 3.1 ಕೋಟಿ ರುಪಾಯಿಗಳಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ