"ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನನ್ನ ಇನ್ಯಾವ ಮಕ್ಕಳೂ ಸೇನೆ ಸೇರುವುದಿಲ್ಲ"

ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನನ್ನ ಇನ್ಯಾವ ಮಕ್ಕಳೂ ಭಾರತೀಯ ಸೇನೆ ಸೇರುವುದಿಲ್ಲ ಎಂದು ಉರಿ ಉಗ್ರದಾಳಿ ವೇಳೆ ಹುತಾತ್ಮರಾದ ವೀರ ಯೋಧ ಎಸ್ ಕೆ ವಿದಾರ್ಥಿ ಅವರ ತಂದೆ ನೋವಿನಿಂದ ಹೇಳಿದ್ದಾರೆ.
ವೀರಯೋಧ ವಿದಾರ್ಥಿ ತಂದೆ ಮಥುರಾ ಯಾದವ್ (ಸಂಗ್ರಹ ಚಿತ್ರ)
ವೀರಯೋಧ ವಿದಾರ್ಥಿ ತಂದೆ ಮಥುರಾ ಯಾದವ್ (ಸಂಗ್ರಹ ಚಿತ್ರ)

ಗಯಾ: ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನನ್ನ ಇನ್ಯಾವ ಮಕ್ಕಳೂ ಭಾರತೀಯ ಸೇನೆ ಸೇರುವುದಿಲ್ಲ ಎಂದು ಉರಿ ಉಗ್ರದಾಳಿ ವೇಳೆ ಹುತಾತ್ಮರಾದ ವೀರ  ಯೋಧ ಎಸ್ ಕೆ ವಿದಾರ್ಥಿ ಅವರ ತಂದೆ ನೋವಿನಿಂದ ಹೇಳಿದ್ದಾರೆ.

ಭಾನುವಾರ ಮುಂಜಾನೆ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರ ದಾಳಿ ವೇಳೆ ಸಾವನ್ನಪ್ಪಿದ ನಾಯ್ಕ್ ಎಸ್ ಕೆ ವಿದಾರ್ಥಿ ಅವರ ಸಾವಿನ ಸುದ್ದಿ ಕೇಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ  ನೀಡಿರುವ ತಂದೆ ಮಥುರಾ ಯಾದವ್ ಅವರು, ಉರಿ ಸೆಕ್ಟರ್ ಮೇಲೆ ನಡೆದ ಉಗ್ರ ದಾಳಿ ಹಿಂದಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಖಂಡಿತಾ ನನ್ನ  ಇನ್ನಾವ ಮಗನೂ ಭಾರತೀಯ ಸೇನೆ ಸೇರಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಆದರೆ ತನ್ನ ತಂದೆ ಸಾವಿನ ನೋವಿನ ನಡುವೆಯೂ ವಿದಾರ್ಥಿ ಪುತ್ರಿಯಾದ ಅರ್ತಿ ಕುಮಾರಿ ಮಾತ್ರ ಅವಕಾಶ ಸಿಕ್ಕರೆ ಭಾರತೀಯ ಸೇನೆ ಸೇರುವುದಾಗಿ ಹೇಳಿದ್ದಾರೆ. "ಪಾಕಿಸ್ತಾನ ಭಾರತದ  ಮೇಲೆ ಒಮ್ಮೆ ದಾಳಿ ಮಾಡಿದರೂ ಅದಕ್ಕೆ ತಕ್ಕೆ ಪ್ರತ್ಯುತ್ತರವನ್ನು ನಾವು ನೀಡಬೇಕು. ನನ್ನ ತಂದೆ ಸತ್ತಿಲ್ಲ. ಅವರು ದೇಶಕ್ಕಾಗಿ ತಮ್ಮ ಬಲಿದಾನ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.   ನನಗೆ ದೆಹಲಿ ಐಐಟಿಯಲ್ಲಿ ವ್ಯಾಸಂಗ ಮಾಡಬೇಕು ಎನ್ನುವ ಹೆಬ್ಬಯಕೆ ಇದೆ. ಆದರೆ ಅದು ಸಾಧ್ಯವಾಗಲಿಲ್ಲವೆಂದರೆ ಖಂಡಿತಾ ನಾನು ಭಾರತೀಯ ಸೇನೆ ಸೇರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಭಾನುವಾರ ಮುಂಜಾನೆ ಉರಿ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿ ವೇಳೆ ಎಸ್ ಕೆ ವಿದಾರ್ಥಿ ವೀರ ಮರಣವನ್ನಪ್ಪಿದ್ದರು. 1999ರಲ್ಲಿ ಸೇನೆಗೆ ಆಯ್ಕೆಯಾಗಿದ್ದ ವಿದಾರ್ಥಿ, ಪತ್ನಿ  ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com