ನವದೆಹಲಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಎಪಿ ಶಾಸಕ ಅಮನತುಲ್ಲಾ ಖಾನ್ ಅವರನ್ನು ಬುಧವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸ್ವತಃ ಅಮನತುಲ್ಲಾ ಖಾನ್ ಸೊಸೆಯೇ ಅವರ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ವಿಚಾರಣೆಗೆಂದು ಆಗಮಿಸಿದ ಆಪ್ ಶಾಸಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸರು ಆಯುಕ್ತ ಆರ್.ಪಿ.ಉಪಾಧ್ಯಯ ಅವರು ತಿಳಿಸಿದ್ದಾರೆ.
ಅಮನತುಲ್ಲಾ ಖಾನ್ ಇಂದು ಎರಡನೇ ಬಾರಿ ಜೈಲು ಪಾಲಾಗಿದ್ದಾರೆ. ಈ ಮುಂಚೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಖಾನ್, ಸೆಪ್ಟೆಂಬರ್ 18ರಂದು ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದರು.
ಡಿಸಿಪಿ ಕಚೇರಿಯಲ್ಲಿ ಸಾಮಾನ್ಯ ಚರ್ಚೆಗೆ ನನ್ನನ್ನು ಕರೆಯಲಾಗಿತ್ತು. ಆದರೆ ಈಗ ಬಂಧಿಸಿದ್ದಾರೆ ಎಂದು ಅಮನತುಲ್ಲಾ ಖಾನ್ ಟ್ವೀಟ್ ಮಾಡಿದ್ದಾರೆ.