ಪ್ರತ್ಯೇಕತಾವಾದಿಗಳಿಗೆ ಮುಖಭಂಗ: ಸೇನೆ ಸೇರಲು ಸಾಲುಗಟ್ಟಿ ನಿಂತ ಕಾಶ್ಮೀರಿ ಯುವಕರು

ನೆ ಮತ್ತು ಪೊಲೀಸ್ ಇಲಾಖೆಗೆ ಬುಧವಾರ ನಡೆದ ನೇಮಕಾತಿ ರ್ಯಾಲಿಗಳಲ್ಲಿ ಕಾಶ್ಮೀರದ ನೂರಾರು ಯುವಕರು ಭಾಗವಹಿಸುವ ಮೂಲಕ, ಕಾಶ್ಮೀರವು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಸೇನೆ ಮತ್ತು ಪೊಲೀಸ್ ಇಲಾಖೆಗೆ ಬುಧವಾರ ನಡೆದ ನೇಮಕಾತಿ ರ್ಯಾಲಿಗಳಲ್ಲಿ ಕಾಶ್ಮೀರದ ನೂರಾರು ಯುವಕರು ಭಾಗವಹಿಸುವ ಮೂಲಕ, ಕಾಶ್ಮೀರವು ಭಾರತದಿಂದ ಪ್ರತ್ಯೇಕಗೊಳ್ಳಬೇಕು ಎನ್ನುತ್ತಿರುವ ಪ್ರತ್ಯೇಕತಾವಾದಿಗಳ ಕರೆಗೆ ತಿರುಗೇಟು ನೀಡಿದ್ದಾರೆ.

ಭದ್ರತಾ ಪಡೆಗಳು ನಡೆಸುವ ನೇಮಕಾತಿ ರ್‍ಯಾಲಿಯನ್ನು ಬಹಿಷ್ಕರಿಸುವಂತೆ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿ ಕರೆ ನೀಡಿದ್ದಾರೆ. ಆದರೆ ಅನಂತನಾಗ್ ಜಿಲ್ಲೆಯಲ್ಲಿ ಬುಧವಾರ ನಡೆದ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಸುಮಾರು  600 ಯುವಕರು ಪಾಲ್ಗೊಂಡಿದ್ದರು.

ಭಾರತೀಯ ಸೇನೆಯಲ್ಲಿ ಯೋಧರಾಗಿ ಹಾಗೂ ಗುಮಾಸ್ತರಾಗಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಯುವಕರನ್ನು ನೇಮಿಸಿಕೊಳ್ಳಲು ಈ ರ್‍ಯಾಲಿ ಆಯೋಜಿಸಲಾಗಿತ್ತು. ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿ 12 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

ಕೇವಲ ಶೇ.5 ರಷ್ಟು ಜನರಿಗೆ ಮಾತ್ರ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುವುದು ಬೇಕಾಗಿರುವುದು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com