44 ವರ್ಷದ ನಂತರ ಮತ್ತೆ ಮಹಿಳಾ ಮೇಯರ್ ನಿರೀಕ್ಷೆಯಲ್ಲಿ ಚೆನ್ನೈ

ಸುದೀರ್ಘ 44 ವರ್ಷಗಳ ನಂತರ ಚೆನ್ನೈ ಮಹಾನಗರ ಪಾಲಿಕೆಗೆ ಮಹಿಳೆಯೊಬ್ಬರು ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ...
ಚೆನ್ನೈ ಮಹಾನಗರ ಪಾಲಿಕೆ
ಚೆನ್ನೈ ಮಹಾನಗರ ಪಾಲಿಕೆ

ಚೆನ್ನೈ: ಸುದೀರ್ಘ 44 ವರ್ಷಗಳ ನಂತರ ಚೆನ್ನೈ ಮಹಾನಗರ ಪಾಲಿಕೆಗೆ ಮಹಿಳೆಯೊಬ್ಬರು ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಚೆನ್ನೈ, ಸೇಲಂ, ಕೊಯಂಬತ್ತೂರ್, ತಂಜಾವೂರು ಮತ್ತು ದಿಂಡಿಗಲ್ ಗಳು ಮಹಿಳಾ ಮೀಸಲಾತಿ ಕ್ಷೇತ್ರವಾಗಿವೆ. ಟ್ಯೂಟಿಕೋರನ್ ಎಸ್ ಎಸ್ ಟಿ ಅಭ್ಯರ್ಥಿಗೆ ಮೀಸಲು ಕ್ಷೇತ್ರವಾಗಿದೆ.
ತಿರುಪುರ್ ಮತ್ತು ಈರೋಡ್ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಾಗಿದೆ. ಹೀಗಾಗಿ ಈ ಬಾರಿ ಮಹಿಳಾ ಮೇಯರ್ ಅಯ್ಕೆಯಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

1971-72 ರಲ್ಲಿ ಕಾಮಾಕ್ಷಿ ಜಯರಾಮನ್ ಎಂಬುವವರು ಮಹಿಳಾ ಮೇಯರ್ ಆಗಿದ್ದರುಯ. ಅದರ ಬಳಿಕ 44 ವರ್ಷಗಳು ಮಹಿಳಾ ಮೇಯರ್ ಆಯ್ಕೆಯಾಗಿರಲಿಲ್ಲ.

ಮೇ 16 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಚೆಪುಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನೂರ್ ಜಹಾನ್ ಈ ಬಾರಿಯ. ಮೇಯರ್ ಅಭ್ಯರ್ಥಿಯಾಗಿ ಘೋಷಣೆಯಾಗು ಸಾಧ್ಯತೆಯಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಜಾರಿಯಾಗಿರುವುದರಿಂದ ಪಾಲಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರ ಸಿಗುವ ಸಾಧ್ಯತೆಯಿದೆ. 2011 ರ ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com