ಜಂಟಿ ಸಮರಾಭ್ಯಾಸಕ್ಕಾಗಿ ಪಾಕ್ ಗೆ ಬಂದಿಳಿದ ರಷ್ಯಾ ಸೇನಾ ಸಿಬ್ಬಂದಿಗಳು

ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ರಷ್ಯಾದ ಸೇನಾ ಸಿಬ್ಬಂದಿಗಳು ಸೆ.23 ರಂದು ಪಾಕಿಸ್ತಾನಕ್ಕೆ ಬಂದಿಳಿದಿದ್ದಾರೆ.
ರಷ್ಯಾ ಸೇನಾ ಸಿಬ್ಬಂದಿ
ರಷ್ಯಾ ಸೇನಾ ಸಿಬ್ಬಂದಿ

ನವದೆಹಲಿ: ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ರಷ್ಯಾದ ಸೇನಾ ಸಿಬ್ಬಂದಿಗಳು ಸೆ.23 ರಂದು ಪಾಕಿಸ್ತಾನಕ್ಕೆ ಬಂದಿಳಿದಿದ್ದಾರೆ. ಉರಿ ದಾಳಿಯನ್ನು ಖಂಡಿಸಿ ರಷ್ಯಾ ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ ಎಂಬ ಸುದ್ದಿ ಪ್ರಕಟವಾಗಿತ್ತಾದರೂ ಈಗ ರಷ್ಯಾ ಜಂಟಿ ಸಮರಾಭ್ಯಾಸ ನಡೆಸಲು ಮುಂದಾಗಿದೆ.

ಆದರೆ ಈ ಹಿಂದೆಯೇ ಹೇಳಿದಂತೆ ಭಾರತ ರಷ್ಯಾ ಮತ್ತು ಪಾಕಿಸ್ತಾನದ ಜಂಟಿ ಸಮರಾಭ್ಯಾಸದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದು, ವಿವಾದಿತ ಪ್ರದೇಶಗಳಾದ ಆಜಾದ್ ಕಾಶ್ಮೀರ ಅಥವಾ ಗಿಲ್ಗಿಟ್ ಬಾಲ್ಟಿಸ್ತಾನ ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಸಮರಾಭ್ಯಾಸ ನಡೆಸುವುದಿಲ್ಲ ಎಂದು ಹೇಳಿದೆ.

ಉತ್ತರ ಪಾಕಿಸ್ತಾನದ ಪ್ರದೇಶದಲ್ಲಿ ಮಾತ್ರ ಸಮರಾಭ್ಯಾಸ ನಡೆಸುವುದಾಗಿ ಹೇಳಿರುವ ರಷ್ಯಾ, ಸೆ.24 ರಿಂದ ಅಕ್ಟೊಬರ್ 7 ವರೆಗೆ  ರಷ್ಯಾ-ಪಾಕಿಸ್ತಾನದ ಜಂಟಿ ಸಮರಾಭ್ಯಾಸ ನಡೆಯಲಿದೆ. ಭಾರತಕ್ಕೆ ಸೇರಬೇಕಿರುವ ಪ್ರದೇಶಗಳಲ್ಲಿ ರಷ್ಯಾ- ಪಾಕಿಸ್ತಾನ ಜಂಟಿ ಸಮರಾಭ್ಯಾಸ ನಡೆಸಲಿದೆ ಎಂಬ ವರದಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಭಾರತ, ರಷ್ಯಾಗೆ ಪಾಕಿಸ್ತಾನದಿಂದ ಭಾರತದ ಮೇಲೆ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕ ದಾಳಿ ಬಗ್ಗೆ ಸೆ.18 ರಂದು ಪಾಕ್ ಉಗ್ರರು ನಡೆಸಿದ್ದ ದಾಳಿಯಲ್ಲಿ 18 ಯೋಧರು ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿತ್ತು. ಭಾರತದ ಆತಂಕಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ವಿವಾದಿತ ಪ್ರದೇಶಗಳಲ್ಲಿ ಸಮರಾಭ್ಯಾಸ ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com