ಉರಿ ದಾಳಿ ಬೆನ್ನಲ್ಲೇ ಬಿಜೆಪಿಯಿಂದ ವೈಭವದ ಕಾರ್ಯಕಾರಿಣಿ ಸಭೆ: ಕಾಂಗ್ರೆಸ್ ಟೀಕೆ

ಬಿಜೆಪಿ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆಸಿರುವ ಕಾರ್ಯಕಾರಿಣಿಯನ್ನು ವೈಭವೋಪೇತವೆಂದು ಹೇಳಿರುವ ಕಾಂಗ್ರೆಸ್...
ಉರಿ ದಾಳಿ ಬೆನ್ನಲ್ಲೇ ಬಿಜೆಪಿಯಿಂದ ವೈಭವದ ಕಾರ್ಯಕಾರಿಣಿ ಸಭೆ: ಕಾಂಗ್ರೆಸ್ ಟೀಕೆ
ಉರಿ ದಾಳಿ ಬೆನ್ನಲ್ಲೇ ಬಿಜೆಪಿಯಿಂದ ವೈಭವದ ಕಾರ್ಯಕಾರಿಣಿ ಸಭೆ: ಕಾಂಗ್ರೆಸ್ ಟೀಕೆ
Updated on

ತಿರುವನಂತಪುರಂ: ಬಿಜೆಪಿ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆಸಿರುವ ಕಾರ್ಯಕಾರಿಣಿಯನ್ನು ವೈಭವೋಪೇತವೆಂದು ಹೇಳಿರುವ ಕಾಂಗ್ರೆಸ್, ಸೆ.18 ರಂದು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ  ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಹುತಾತ್ಮರಾದ ನಂತರ ಇಂತಹ ವೈಭವೋಪೇತ ಕಾರ್ಯಕ್ರಮವನ್ನು ನಡೆಸಿರುವುದನ್ನು ಟೀಕಿಸಿದೆ.

ದೇಶಕ್ಕಾಗಿ 18 ಯೋಧರು ಬಲಿದಾನ ಮಾಡಿರುವ ಬೆನ್ನಲ್ಲೇ ಬಿಜೆಪಿ ಕಾರ್ಯಕಾರಿಣಿಸಭೆಯನ್ನು ಆಯೋಜಿಸಿದೆ ಎಂದು ಕೇರಳ ಕಾಂಗ್ರೆಸ್ ನ ಅಧ್ಯಕ್ಷ ವಿಎಂ ಸುಧೀಂದ್ರನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಮುಂದೂಡಬೇಕಿತ್ತು ಎಂದು ಸುಧೀಂದ್ರನ್ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ವೈಭವೋಪೇತ ಕಾರ್ಯಕಾರಿಣಿಯನ್ನುದ್ದೇಶಿಸಿ ಮಾತನಾಡುವ ಬದಲು ವಿಶೇಷ ಸಂಸತ್ ಅಧಿವೇಶನ ಕರೆದು ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಸಂಸತ್ ನಲ್ಲಿ ಪ್ರಸ್ತಾಪಿಸಬೇಕಿತ್ತು ಎಂದಿದ್ದಾರೆ. ಈ ಹಿಂದೆ ಭೇಟಿ ನೀಡಿದ್ದ ವೇಳೆ ಕೇರಳದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಸುಧೀಂದ್ರನ್ ಇದೆ ವೇಳೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com