ಬೈಕ್ ಮೇಲೆ ಅಜ್ಜಿಯನ್ನು ಆಸ್ಪತ್ರೆಯೊಳಗೆ ಕರದೊಯ್ದ ಮೊಮ್ಮಗ
ದೇಶ
ವ್ಹೀಲ್ ಚೇರ್ ಸಿಗದೆ ಬೈಕ್ ಮೇಲೆ ಅಜ್ಜಿಯನ್ನು ಆಸ್ಪತ್ರೆಯೊಳಗೆ ಕರೆದೊಯ್ದ ಮೊಮ್ಮಗ
ಬಾಲಿವುಡ್ ನ 3 ಈಡಿಯಟ್ಸ್ ಚಿತ್ರದಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ ನಾಯಕ ಅಮೀರ್ ಖಾನ್ ತಮ್ಮ ಸ್ಕೂಟಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ...
ಜಜುವಾ(ಮಧ್ಯಪ್ರದೇಶ): ಬಾಲಿವುಡ್ ನ 3 ಈಡಿಯಟ್ಸ್ ಚಿತ್ರದಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ ನಾಯಕ ಅಮೀರ್ ಖಾನ್ ತಮ್ಮ ಸ್ಕೂಟಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವುದನ್ನು ನೋಡಿರುತ್ತೀರಿ ಅದೇ ರೀತಿ ಮಧ್ಯಪ್ರದೇಶದ ಬುಜವಾದಲ್ಲಿ ನೈಜ ಘಟನೆಯೊಂದು ನಡೆದಿದೆ.
ಮಧ್ಯಪ್ರದೇಶ ಯುವಕನೊಬ್ಬ ತೀವ್ರ ಜ್ವರದಿಂದ ಬಳಲುತ್ತಿದ್ದ ತನ್ನ ಅಜ್ಜಿಯನ್ನು ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದಾನೆ. ಆಸ್ಪತ್ರೆಯ ಒಳಗೆ ಕರೆದೊಯ್ಯಲು ಗಾಲಿ ಕುರ್ಚಿಯನ್ನು ನೀಡುವಂತೆ ಸಿಬ್ಬಂದಿಯನ್ನು ಕೇಳಿದ್ದಾನೆ. ಆದರೆ ವ್ಹೀಲ್ ಚೇರ್ ಸಿಗದ ಕಾರಣ ಆತ ಬೈಕ್ ನಲ್ಲೇ ಆಸ್ಪತ್ರೆಯೊಳಗೆ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾನೆ.
ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಸೆರೆ ಹಿಡಿದಿದ್ದಾರೆ. ಅಜ್ಜಿಯನ್ನು ಆಸ್ಪತ್ರೆಯೊಳಗೆ ಕರೆದುಕೊಂಡು ಹೋದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆದರೆ ಸ್ಥಳಕ್ಕೆ ಮಾಧ್ಯಮದವರು ಬರುತ್ತಿದ್ದಂತೆ ವೈದ್ಯರು ವೃದ್ಧೆಗೆ ಚಿಕಿತ್ಸೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ