

ಕೊಯ್ಯಮತ್ತೂರ್: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೊಯ್ಯಮತ್ತೂರ್ ನಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ ಸೆಲ್ಲಾಪ್ಪನಪಾಳ್ಯಂ ಪಿರಿವು ಬಳಿ ಪೊಲಚ್ಚಿ ಬಳಿ ದಾರುಣ ಸಾವು ಸಂಭವಿಸಿದೆ. ರಾಜೀವ್ ನಗರದ ನಿವಾಸಿ 70 ವರ್ಷದ ನಟರಾಜ್, ಮಗ ತಿರುಮುರುಗನ್, ಮಗಳು ಜಯಲಕ್ಷ್ಮಿ, ಅಳಿಯ ಆನಂದ ಕೃಷ್ಣನ್, ಮೊಮ್ಮಗಳು 10 ವರ್ಷದ ಶೃತಿ ಮೃತ ದುರ್ದೈವಿಗಳು.
ಅಪಘಾತದಲ್ಲಿ ಗಾಯಗೊಂಡಿರುವ ಇನ್ನು ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಆನಂದ್ ಕುಮಾರ್ ಅವರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಗುದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.