ಇಂಡೋ-ಪಾಕ್ ಗಡಿಯಲ್ಲಿ ಉದ್ವಿಘ್ನ ವಾತಾವರಣ: ಸೇನಾ ನೆಲೆಗೆ ದಲ್ಬೀರ್ ಸಿಂಗ್ ಭೇಟಿ

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ನಿಘ್ನ ವಾತಾವರಣ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ದರ್ಬೀರ್ ಸಿಂಗ್ ಅವರು ಸೇನಾ ನೆಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆಂದು...
ಸೇನಾ ಮುಖ್ಯಸ್ಥ ದರ್ಬೀರ್ ಸಿಂಗ್
ಸೇನಾ ಮುಖ್ಯಸ್ಥ ದರ್ಬೀರ್ ಸಿಂಗ್

ಉಧಂಪುರ: ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ನಿಘ್ನ ವಾತಾವರಣ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ದರ್ಬೀರ್ ಸಿಂಗ್ ಅವರು ಸೇನಾ ನೆಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿತ್ತು. ಈ ದಾಳಿಗೆ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸೀಮಿತ ದಾಳಿ ನಂತರ ಪಾಕಿಸ್ತಾನ ಈ ವರೆಗೂ 6 ಬಾರಿ ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ.

ಇದರಂತೆ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಘ್ನ ವಾತಾವರಣ ಮುಂದುವರೆದಿದ್ದು, ಉತ್ತರ ವಲಯದ ಸೇನಾ ನೆಲೆಗಳಿಗೆ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಭದ್ರತಾ ಪರಿಸ್ಥಿತಿ ಕುರಿತಂತೆ ವರದಿಯನ್ನು ಪಡೆದಿದ್ದಾರೆ. ಸೀಮಿತ ದಾಳಿಯ ಯಶಸ್ಸು ಕುರಿತಂತೆ ವೈಯಕ್ತಿಕವಾಗಿ ಸೇನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ಉತ್ತರ ವಲ್ಯದ ನಂತರ ಪಶ್ಚಿಮ ವಲಯದ ಸೇನಾ ನೆಲೆಗೆ ದಲ್ಬೀರ್ ಸಿಂಗ್ ಅವರು ಭೇಟಿ ನೀಡಲಿದ್ದು,  ಕಾರ್ಯಾಚರಣೆ ಹಾಗೂ ಭದ್ರತೆ ಕುರಿತಂತೆ ವರದಿಯನ್ನು ಪಡೆಯಲಿದ್ದಾರೆಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ನಡೆದ ಕೂಡಲೇ ಉಗ್ರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ. ಸೀಮಿತ ದಾಳಿಯಲ್ಲಿ 40ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆನ್ನಲಾಗುತ್ತಿದ್ದು, ಒಟ್ಟಾರೆ ಉಗ್ರರ ಕುರಿತಂತೆ ಈವರೆಗೂ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಭಾರತೀಯ ಸೇನೆಯ ಸೀಮಿತ ದಾಳಿಯನ್ನು ಪಾಕಿಸ್ತಾನ ಖಂಡಿಸಿದ್ದು, ದಾಳಿಗೆ ತೇಪೆ ಹಚ್ಚುವ ಪ್ರಯತ್ನಗಳನ್ನು ಮಾಡುತ್ತಿದೆ. 8 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆಂದು ಪಾಕಿಸ್ತಾನ ಸೇನೆ ಹೇಳಿಕೆಗಳನ್ನು ನೀಡುತ್ತಿದೆ. ಈ ಹೇಳಿಕೆಯನ್ನು ಭಾರತೀಯ ಸೇನೆ ತಿರಸ್ಕರಿಸಿದೆ. ಸೀಮಿತ ದಾಳಿಯಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಕಾರ್ಯಾಚರಣೆಗಿಳಿದ ಎಲ್ಲಾ ಯೋಧರು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಬಂದಿದ್ದಾರೆ. ಅದರೆ, ಓರ್ವ ಯೋಧನಿಗೆ ಮಾತ್ರ ಗಾಯವಾಗಿತ್ತು. ಭಾರತಕ್ಕೆ ಹಿಂತಿರುಗಿ ಬರುತ್ತಿದ್ದಾಗ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅದೂ ಕೂಡ ಶತ್ರುಗಳಿಂದಾಗಲಿ ಅಥವಾ ಉಗ್ರರಿಂದಾಗಲಿ ಸಂಭವಿಸಿದ ಗಾಯವಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com